ಕಾಸರಗೋಡು: ಕೇರಳದ ಸರ್ಕಾರಿ ಸಂಸ್ಥೆ ಐ ಎಚ್ ಆರ್ ಡಿ 2024 ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ 1 ಮತ್ತು 2ನೇ ಸೆಮಿಸ್ಟರ್ ಪೆÇೀಸ್ಟ್ ಗ್ರಾಜುಯೇಟ್ ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಪಿಜಿಡಿಸಿಎ) ಹಾಗೂ 1ನೇ ಮತ್ತು 2ನೇ ಸೆಮೆಸ್ಟರ್ ಡಿಪೆÇ್ಲಮಾ ಇನ್ ಡೇಟಾ ಎಂಟ್ರಿ ಟೆಕ್ನಿಕ್ಸ್ ಆಂಡ್ ಆಫೀಸ್ ಆಟೊಮೇಷನ್ (ಡಿಡಿಟಿಒಎ) ಯಾ ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಡಿಸಿಎ) ಮತ್ತು ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಆಂಡ್ ಸಯನ್ಸ್ ( ಸಿಸಿಎಲ್‍ಐಎಸ್ ) ಎಂಬೀ ಕೋರ್ಸ್‍ಗಳ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಪರೀಕ್ಷಾ ಫಲಿತಾಂಶ ಮತ್ತು ಅಂಕದ ವಿವರಗಳನ್ನು ಆಯಾ ಪರೀಕ್ಷಾ ಕೇಂದ್ರಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು. ಅಲ್ಲದೆ ಪರೀಕ್ಷೆಯ ಫಲಿತಾಂಶವನ್ನು ಐಎಚ್‍ಆರ್‍ಡಿಯ ವೆಬ್‍ಸೈಟ್‍ನಲ್ಲಿ (www.ihrd.ac.in)ಪ್ರಕಟಿಸಲಾಗಿದೆ. ಮರುಮೌಲ್ಯಮಾಪನದ ಅರ್ಜಿಗಳನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ದಂಡ ರಹಿತವಾಗಿ ನವೆಂಬರ್ 12ರವರೆಗೆ ಹಾಗೂ ನವೆಂಬರ್ 15 ರಿಂದ 200 ರೂ. ತಡ ದಂಡ ಶುಲ್ಕದೊಂದಿಗೆ ಸಲ್ಲಿಸಬಹುದು. ಫೆಬ್ರವರಿ 2025ರ ಪೂರಕ ಪರೀಕ್ಷೆಗೆ ವಿಶೇಷ ಮಂಜೂರಾತಿ ಬಯಸುವವರು ನವೆಂಬರ್ 7ರ ಮೊದಲು ಮತ್ತು ನವೆಂಬರ್ 11ರೊಳಗೆ ತಡ ಶುಲ್ಕ( 200) ರೂ.ಗಳೊಂದಿಗೆ ಅರ್ಜಿಗಳನ್ನು ಆಯಾ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಸಲ್ಲಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.