ಕಾಸರಗೋಡು: ಇರಿಯಣ್ಣಿ: ಮುಂಡಕ್ಕೈ ಚುರಲ್ಮಲಾ ದುರಂತ ಸಂಭವಿಸಿ ತಿಂಗಳು ಕಳೆದರೂ ಕೇಂದ್ರ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಗ್ರಂಥಾಲಯಗಳು ಸೇರಿದಂತೆ ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಾಕಷ್ಟು ಕೊಡುಗೆ ಈಗಾಗಲೇ ನೀಡಿದ್ದಾರೆ. ಆದರೆ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ದೊಡ್ಡ ದುರಂತದ ನಡುವೆಯೂ ಕೇಂದ್ರದ ಕಡೆಯಿಂದ ಇಂತಹ ನಿರಾಸಕ್ತಿ ತೋರುತ್ತಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಲಿದೆ ಎಂದು ಗ್ರಂಥಾಲಯ ಸಭೆ ನಿರ್ಣಯಿಸಿದೆ.
ಗ್ರಂಥಾಲಯ ಅಧ್ಯಕ್ಷ ಕೆ.ರಘು ಅಧ್ಯಕ್ಷತೆ ವಹಿಸಿದ್ದರು. ನವಭಾರತ ಕ್ಲಬ್ ಅಧ್ಯಕ್ಷ ಗಿರೀಶ್ ಕುಮಾರ್, ಟಿ.ಸಾಜು, ಹನೀಫ ಕೆ.ಎಂ, ಟಿ. ಸನೋಜ್ ಮಾತನಾಡಿದರು. ಗ್ರಂಥಾಲಯ ಕಾರ್ಯದರ್ಶಿ ಕೆ. ಸತ್ಯನ್ ಸ್ವಾಗತಿಸಿ,ವಂದಿಸಿದರು.