ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಎಂಪ್ಲಾಯಬಿಲಿಟಿ ಸೆಂಟರ್ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನ.30 ರಂದು ಬೆಳಗ್ಗೆ 10ಕ್ಕೆ ಮಂಜೇಶ್ವರ ಬ್ಯೂರೋ ಉದ್ಯೋಗ ವಿನಿಮಯ ಬ್ಲಾಕ್ ಪಂಯಿತಿ ಕಛೇರಿಯಲ್ಲಿ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಪಡೆಯುವುದಕ್ಕಿರುವ ಸಂದರ್ಶನ ತರಬೇತಿ, ಇಂಗ್ಲಿಷ್ ತರಗತಿ, ಸಾಫ್ಟ್ ಸ್ಕಿಲ್ ತರಬೇತಿ ಇತ್ಯಾದಿಗಳು ಒಂದು ಬಾರಿ ನೋಂದಣಿಯೊಂದಿಗೆ ಜೀವಮಾನದವರೆಗೆ ಉಚಿತವಾಗಿ ಲಭ್ಯವಿರುವುದು. ಅಲ್ಲದೆ ಉದ್ಯೋಗ ಪಡೆಯಲು ಖಾಸಗಿ ಸಂಸ್ಥೆಗಳಲ್ಲಿ ಪ್ರತಿ ವಾರ ಸಂದರ್ಶನಗಳನ್ನು ನಡೆಸಲಾಗುತ್ತದೆ. ಎಸ್ಸೆಸೆಲ್ಸಿ ಅರ್ಹತೆಯಿರುವ 18ರಿಮದ 35ರೊಳಗಿನ ವಯೋಮಿತಿಯ ಅಭ್ಯರ್ಥಿಗಳು ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ರೂ.250 ಶುಲ್ಕ ಪಾವತಿಸಿ ಆಧಾರ್ ಕಾರ್ಡ್ ಪ್ರತಿ ಮತ್ತು ಪ್ರಮಾಣಪತ್ರಗಳ ಸಹಿತ ಬೆಳಗ್ಗೆ 10 ಗಂಟೆಗೆ ನೋಂದಾಯಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.