HEALTH TIPS

ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಶಾಂತಿ ಸಾಧನೆ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

 ಕೀವ್‌ : ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಂಘರ್ಷ ಏರ್ಪಡದಂತೆ ನೋಡಿಕೊಳ್ಳಲು ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಸಾಧ್ಯ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ರಾತ್ರಿ ಹೇಳಿದ್ದಾರೆ.

ವಿಡಿಯೊ ಭಾಷಣದದಲ್ಲಿ ಅವರು, 'ಸಾಮರ್ಥ್ಯವಿಲ್ಲದ ರಾಜತಾಂತ್ರಿಕತೆಯಿಂದ ಏನನ್ನೂ ನಿರೀಕ್ಷಿಸಲಾಗದು ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ.

'ರಾಜತಾಂತ್ರಿಕ ಗುರಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದಿದ್ದರೆ, ಶಸ್ತ್ರಾಸ್ತ್ರಗಳು ಕೆಲಸಕ್ಕೆ ಬರುವುದಿಲ್ಲ. ಹಾಗಾಗಿಯೇ, ಸಾಮರ್ಥ್ಯ ಮತ್ತು ರಾಜತಾಂತ್ರಕತೆಯು ಒಂದು ಕೈಯಲ್ಲಿ (ಒಟ್ಟಾಗಿ) ಕಾರ್ಯನಿರ್ವಹಿಸಬೇಕು' ಎಂದಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಹಾಗೂ ದೀರ್ಘಾವಧಿಗೆ ಶಾಂತಿ ನೆಲೆಸುವಂತೆ ಮಾಡಲು ಇರುವ ಏಕೈಕ ಮಾತ್ರ ಇದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಒತ್ತಾಯಿಸಿರುವ ಝೆಲೆನ್‌ಸ್ಕಿ, ಯುದ್ಧ ನ್ಯಾಯಯುತವಾಗಿ ಅಂತ್ಯವಾಗಬೇಕು. ಅದರಂತೆ ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನಕ್ಕೆ ಉಕ್ರೇನ್‌ ಮುಕ್ತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರಷ್ಯಾ, ತನ್ನ ನೆರೆ ರಾಷ್ಟ್ರವಾಗಿರುವ ಉಕ್ರೇನ್‌ ಮೇಲೆ 2022ರ ಫೆಬ್ರುವರಿಯಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಆಗಿನಿಂದ ಯುದ್ಧ ಮುಂದುವರಿದಿದೆ. ಈವರೆಗೆ ಸಾವಿರಾರು ಜನರು ಮೃತಪಟ್ಟಿದ್ದು, ಲಕ್ಷಾಂತರ ಉಕ್ರೇನಿಯರು ನೆಲೆ ಕಳೆದುಕೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries