ಕಾಸರಗೋಡು: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು(ನ.14) ಮಕ್ಕಳ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಸತ್ತು ಆಯೋಜಿಸಲಾಗಿದೆ.
ವಿದ್ಯಾನಗರ ಅಸಪ್ ಸೆಂಟರ್ ಆವರಣದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ವಿವಿಧ ಶಾಲೆಗಳ ಸುಮಾರು ಸಾವಿರ ಮಕ್ಕಳು ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮಕ್ಕಳ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ವೆಳ್ಳರಿಕುಂಡ್ ನ ಸೇಂಟ್ ಎಲಿಜಬೆತ್ ಶಾಲೆಯ ಅಬೆಲ್ ಜಿನ್ಸ್ ಅವರು ವಿದ್ಯಾನಗರ ಸನ್ ರೈಸ್ ಪಾರ್ಕ್ ನಲ್ಲಿ ಮಕ್ಕಳ ಸಂಸತ್ತನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಸಂಸತ್ ಅಧ್ಯಕ್ಷೆ ಮೇಲಂಗೋಡು ಜಿ.ಯು.ಪಿ.ಶಾಲೆಯ ವಸುಂಧರಾ ಕೆ.ಎಸ್. ಅಧ್ಯಕ್ಷತೆ ವಹಿಸುವರು. ಮಕ್ಕಳ ವಿರೋಧ ಪಕ್ಷದ ನಾಯಕ ಕೀಕಲ್ ಆರ್.ಎಂ.ಎಂ.ಜಿ.ಯು.ಪಿ.ಎಸ್ ಶಾಲೆಯ ಅವನಿ ಎಂ. ಮುಖ್ಯ ಭಾಷಣ ಮಾಡಲಿದ್ದಾರೆ. ಮಕ್ಕಳ ಸಂಸತ್ತಿನ ಕಾರಟೇರಿ ಜಿ.ಯುಪಿಎಸ್ ನ ಮಾಳವಿಕಾ ಪಿ., ಕೀಕಲ್ ಆರ್.ಎಂ.ಎಂ. ಜಿಯುಪಿಎಸ್ ನ ಸಹನಾ ಎಂ. ರಾವ್ ಮುಂತಾದವರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಕ್ಕಳ ದಿನಾಚರಣೆಯ ಅಂಚೆಚೀಟಿ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮಕ್ಕಳ ದಿನಾಚರಣೆ ಸಂದೇಶ ನೀಡಿ, ಉಡುಗೊರೆ ವಿತರಿಸುವರು. ಜಿಲ್ಲಾ ಪೋಲೀಸ್ ಉಪ ಆಯುಕ್ತ ಪಿ. ಬಾಲಕೃಷ್ಣನ್ ನಾಯರ್, ಜಿಲ್ಲಾ ಶಿಕ್ಷಣಾಧಿಕಾರಿ ಟಿ.ವಿ. ಮಧುಸೂದನನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಅಪರ ಜಿಲ್ಲಾಧಿಕಾರಿ ಪಿ. ಸುರ್ಜಿತ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ. ರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಲ್. ಶೇಬಾ, ಡಿಸಿಪಿಒ ಶೈನಿ ಐಸಾಕ್. ಶಿಶು ಕ್ಷೇಮ ಸಮಿತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಓ.ಎಂ. ಬಾಲಕೃಷ್ಣನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ. ಕರೀಂ, ಸಿ.ವಿ.ಗಿರೀಶನ್, ಜಯನ್ ಕಾಡಗಂ ಮಾತನಾಡುವರು. ಶಿಶು ಕ್ಷೇಮ ಸಮಿತಿ ಆಯೋಜಿಸಿದ್ದ ವರ್ಣೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.