HEALTH TIPS

ಎಡನೀರುಶ್ರೀ ವಾಹನದ ಮೇಲೆ ದಾಳಿ-ಬಿಜೆಪಿ ಖಂಡನೆ

ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಂಚರಿಸುತ್ತಿದ್ದ ಕಾರಿನ ಮೇಲೆ ನಡೆದ ದಾಳಿಯನ್ನು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ತೀವ್ರವಾಗಿ ಖಂಡಿಸಿದ್ದಾರೆ.  ಸಮಾಜದ ಎಲ್ಲ ವರ್ಗದವರೂ ಗೌರವಿಸುವ ಸ್ವಾಮೀಜಿಗೂ ರಸ್ತೆಯಲ್ಲಿ ನಿರ್ಭಯವಾಗಿ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು,  ಎಡನೀರು ಸ್ವಾಮೀಜಿ ಮತ್ತು ಶ್ರೀಮಠಕ್ಕೆಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಪೆÇಲೀಸರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕಳ್ಳತನ ನೆಪದಲ್ಲಿ ಹಿಂದೂ ದೇವಾಲಯಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳ ಬಗ್ಗೆ ಪೆÇಲೀಸರು ಕಠಿಣ ಕ್ರಮಕ್ಕೆ ಮುಂದಾಗದಿರುವುದರಿಂದ ಪ್ರಕರಣ ಮರುಕಳಿಸಲು ಕಾರಣವಾಗುತ್ತಿದೆ. ಇದರಿಂದಾಗಿ ಹಿಂದೂ ಆರಾಧನಾಲಯಗಳಿಂದ ಕಳವು, ಧಾರ್ಮಿಕ ಮುಖಂಡರು ಸಂಚರಿಸುವ ವಾಹನಗಳ ಮೇಲೆ ದಾಳಿ ಹೆಚ್ಚಾಗಲು ಕಾರಣವಾಘಿದೆ.  ಇತ್ತೀಚಿನ ದಿನಗಳಲ್ಲಿ ಅಪರಾಧಗಳಲ್ಲಿ ಶಾಮೀಲಾಗುತ್ತಿರುವವರನ್ನು  ಪತ್ತೆಹಚ್ಚಲು ಅಥವಾ ಇವರನ್ನು ಬಂಧಿಸಲು ಪೆÇಲೀಸರಿಗೆ ಸಾಧ್ಯವಾಗುತ್ತಿಲ್ಲ. ಸಮಾಜಬಾಹಿರ ಕೃತ್ಯಗಳು ಹೆಚ್ಚುತ್ತಿದ್ದರೂ, ಪೆÇಲೀಸರಾಗಲಿ, ಸರ್ಕಾರವಾಗಲಿ ಇದನ್ನು ಕಟ್ಟುನಿಟ್ಟಾಗಿ ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ. ಮನೆಗಳ್ಳತನ, ದರೋಡೆ ಪ್ರಕರಣ ಹೆಚ್ಚಾಗಿರುವುದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿದೆ.  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ತೋರುವ ನಿರ್ಲಕ್ಷ್ಯ ಧೋರಣೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿರುವುದಾಗಿ ಕೆ. ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries