HEALTH TIPS

ವಿಶೇಷ ಸ್ಥಾನಮಾನ ಮರುಸ್ಥಾಪನೆ: ಜಮ್ಮು& ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

          ಶ್ರೀನಗರ: ಬಿಜೆಪಿ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆಯೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಬುಧವಾರ ನಿರ್ಣಯ ಅಂಗೀಕರಿಸಿತು.

         ಈ ವಿಚಾರವಾಗಿ ಕೇಂದ್ರ ಸರ್ಕಾರವು ಇಲ್ಲಿನ ಚುನಾಯಿತ ಪ್ರತಿನಿಧಿಗಳ ಜತೆ ಸಂವಾದ ನಡೆಸಬೇಕು ಎಂದೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

           ಈ ನಿರ್ಣಯದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ನಿರ್ಣಯದ ಪ್ರತಿಗಳನ್ನು ಹರಿದು, ಸ್ಪೀಕರ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ 'ಜೈ ಶ್ರೀ ರಾಮ್‌' ಘೋಷಣೆಗಳು ಪ್ರತಿಧ್ವನಿಸಿದವು.

              ವಿರೋಧ ಪಕ್ಷದ ಸದಸ್ಯರ ಗದ್ದಲಗಳ ನಡುವೆಯೇ ಸ್ಪೀಕರ್‌ ನಿರ್ಣಯದ ಪ್ರಸ್ತಾವವನ್ನು ಧ್ವನಿ ಮತಕ್ಕೆ ಹಾಕಿದರು. ಗದ್ದಲವಿದ್ದರಿಂದ ಚರ್ಚೆ ನಡೆಯದೇ ನಿರ್ಣಯ ಅಂಗೀಕಾರವಾಯಿತು. ಧ್ವನಿ ಮತದ ವೇಳೆ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪಿಡಿಪಿ, ಪೀಪಲ್ಸ್‌ ಕಾನ್ಫರೆನ್ಸ್, ಸಿಪಿಐ (ಎಂ) ಸದಸ್ಯರು ನಿರ್ಣಯವನ್ನು ಬೆಂಬಲಿಸಿದರು.

ಪ್ರತಿಧ್ವನಿಸಿದ ಘೋಷಣೆಗಳು:

            ನಿರ್ಣಯ ವಿರೋಧಿಸಿದ ಬಿಜೆಪಿ ಸದಸ್ಯರು, 'ಆಗಸ್ಟ್ 5 ಜಿಂದಾಬಾದ್‌', 'ಜೈ ಶ್ರೀ ರಾಮ್‌', 'ವಂದೇ ಮಾತರಂ', 'ದೇಶ ವಿರೋಧಿ ಕಾರ್ಯಸೂಚಿ ನಡೆಯಲ್ಲ', 'ಜಮ್ಮು ವಿರೋಧಿ ಕಾರ್ಯಸೂಚಿ ನಡೆಯಲ್ಲ', 'ಪಾಕಿಸ್ತಾನಿ ಕಾರ್ಯಸೂಚಿಯೂ ನಡೆಯಲ್ಲ' ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ 'ಸ್ಪೀಕರ್‌ ಗೋ ಬ್ಯಾಕ್‌', 'ಕಾನೂನು ಬಾಹಿರ ನಿರ್ಣಯವನ್ನು ಹಿಂಪಡೆಯಿರಿ' ಎಂಬ ಘೋಷಣೆಗಳನ್ನೂ ಅವರು ಕೂಗಿದರು.

         ನಿರ್ಣಯ ಅಂಗೀಕಾರವಾದ ಬೆನ್ನಲ್ಲೇ ಎನ್‌ಸಿ, ತನ್ನ ಪ್ರಣಾಳಿಕೆಯ ಭರವಸೆಗಳಲ್ಲಿ ಒಂದನ್ನು ಈಡೇರಿಸಲಾಗಿದೆ ಎಂದು ಪ್ರತಿಕ್ರಿಯಿಸಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ವಿಧಾನಸಭೆಯು ತನ್ನ ಕೆಲಸ ಮಾಡಿದೆ' ಎಂದು ಹೇಳಿದರು. ನಿರ್ಣಯ ಅಂಗೀಕಾರವನ್ನು ವಿವಿಧ ರಾಜಕೀಯ ಪಕ್ಷಗಳು ಸ್ವಾಗತಿಸಿವೆ.

              ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ಸುರಿಂದರ್‌ ಚೌಧರಿ ಅವರು ನಿರ್ಣಯ ಮಂಡಿಸಿದರು. ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ತೆಗೆದುಹಾಕಿದ್ದಕ್ಕೆ ನಿರ್ಣಯದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಮರುಸ್ಥಾಪನೆಯ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ, ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ರಕ್ಷಿಸಬೇಕು ಎಂದೂ ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ ಸರ್ಕಾರ 2019ರಲ್ಲಿ ಹಿಂಪಡೆದಿತ್ತು. ಅಲ್ಲದೆ ಹಿಂದಿನ ರಾಜ್ಯವನ್ನು ಜಮ್ಮು- ಕಾಶ್ಮೀರ ಮತ್ತು ಲಡಾಖ್‌ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಅರೆಮನಸ್ಸಿನ ಯತ್ನ: ಮುಫ್ತಿ

          ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, 'ಇದು ಅರೆಮನಸ್ಸಿನ ಯತ್ನವಾಗಿದ್ದು, ನಿರ್ಣಯವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಬರೆಯಬಹುದಿತ್ತು' ಎಂದು ಪ್ರತಿಕ್ರಿಯಿಸಿದ್ದಾರೆ.

ನಿರ್ಣಯ ತಿರಸ್ಕರಿಸಿದ ಬಿಜೆಪಿ: ಪ್ರತಿಭಟನೆ

        ವಿರೋಧ ಪಕ್ಷದ ನಾಯಕ ಸುನೀಲ್‌ ಶರ್ಮಾ ಸೇರಿದಂತೆ ಬಿಜೆಪಿ ಸದಸ್ಯರು ಕಲಾಪದಲ್ಲಿ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು.

             'ಇದು ಕಲಾಪಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಪಟ್ಟಿಯ ಭಾಗವಲ್ಲ. ಲೆಫ್ಟಿನೆಂಟ್‌ ಜನರಲ್‌ ಅವರ ಭಾಷಣದ ಮೇಲಿನ ಚರ್ಚೆಯಿದೆ ಎಂದು ನಮಗೆ ನೀಡಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಾವು ಈ ನಿರ್ಣಯವನ್ನು ತಿರಸ್ಕರಿಸುತ್ತೇವೆ' ಎಂದು ಶರ್ಮಾ ಹೇಳಿದರು.

'ಇಲ್ಲಿ ನಿರ್ಣಯ ವಿಷಯದಲ್ಲಿ ಪಕ್ಷಗಳ ನಡುವೆ ಸ್ಪರ್ಧೆಯಿದೆ. ಆದರೆ ಏನೂ ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಏಕೆಂದರೆ ಈ ಕಾಯ್ದೆಯು ದೇಶದ ಪ್ರಜಾಪ್ರಭುತ್ವದ ಅತಿದೊಡ್ಡ ದೇವಾಲಯವಾದ ಸಂಸತ್ತಿನಲ್ಲಿ ಅಂಗೀಕಾರವಾಗಿದೆ' ಎಂದರು.

           ಶರ್ಮಾ ಅವರ ಹೇಳಿಕೆಗಳಿಗೆ ಆಡಳಿತಾರೂಢ ಪಕ್ಷ ಮತ್ತು ಅದರ ಬೆಂಬಲ ಪಕ್ಷಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಎನ್‌ಸಿ ಮತ್ತು ಬಿಜೆಪಿ ಸದಸ್ಯರು ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಸದಸ್ಯರು ನಿರ್ಣಯದ ಪ್ರತಿಗಳನ್ನು ಹರಿದು ಸ್ಪೀಕರ್‌ ಪೀಠದ ಮುಂದೆ ಎಸೆದರು.

ಈ ವೇಳೆ ಸ್ಪೀಕರ್‌ ಪೀಠದತ್ತ ಧಾವಿಸಿದ ಶಾಸಕ ಶೇಖ್‌ ಖುರ್ಷೀದ್‌ ಅವರನ್ನು ಮಾರ್ಷಲ್‌ಗಳು ತಡೆದರು. ನಿರ್ಣಯ ಅಂಗೀಕಾರ ಆಗಬೇಕೆಂದು ಎನ್‌ಸಿ ಸದಸ್ಯರು ಘೋಷಣೆಗಳನ್ನು ಕೂಗಿದರು.

            ಬಿಜೆಪಿ ಸದಸ್ಯರು ನಿರ್ಣಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರ ನಡುವೆಯೇ ಸ್ಪೀಕರ್‌ ಅಬ್ದುಲ್‌ ರಹೀಂ ರಾಥರ್‌ ಅವರು ವಿರೋಧ ಪಕ್ಷದ ಸದಸ್ಯರು ಚರ್ಚೆ ಬಯಸದಿದ್ದರೆ ಮತಕ್ಕೆ ಹಾಕುವುದಾಗಿ ಹೇಳಿದರು. ಅದರ ಬೆನ್ನಲ್ಲೇ ಅವರು ಧ್ವನಿಮತಕ್ಕೆ ಹಾಕಿದರು.

             ಗದ್ದಲದ ನಡುವೆಯೇ ನಿರ್ಣಯ ಅಂಗೀಕಾರವಾಯಿತು. ನಿರ್ಣಯ ಅಂಗೀಕಾರ ಆದ ಬೆನ್ನಲ್ಲೇ ಬಿಜೆಪಿ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿ ಪ್ರತಿಭಟಿಸಿದರು. ಸ್ಪೀಕರ್‌ ಕಲಾಪವನ್ನು 15 ನಿಮಿಷ ಮುಂದೂಡಿದರು. ಮತ್ತೆ ಮತ್ತೆ ಕಲಾಪ ಸೇರಿದಾಗಲೂ ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಘೋಷಣೆಗಳು ಮುಂದುವರಿದವು. ಇದರಿಂದ ಕಲಾಪಕ್ಕೆ ಪದೇ ಪದೇ ಅಡ್ಡಿ ಉಂಟಾಯಿತು. ಅಂತಿಮವಾಗಿ ಸ್ಪೀಕರ್‌ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries