ಸಮರಸ ಚಿತ್ರಸುದ್ದಿ: ಬದಿಯಡ್ಕ: ಉದಿನೂರಿನಲ್ಲಿ ಜರುಗಿದ ಕಾಸರಗೋಡು ಜಿಲ್ಲಾ ಮಟ್ಟದ ಕಲೋತ್ಸವದ ಪ್ರೌಢಶಾಲಾ ವಿಭಾಗದ ಹುಡುಗರ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ‘ಎ’ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ತಿರುವನಂತಪುರಂ ನಲ್ಲಿ ಜರುಗಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ಪ್ರದ್ಯುಮ್ನ ಶರ್ಮಾ ಉಪ್ಪಂಗಳ.
ಈತ ನವಜೀವನ ಶಾಲಾ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ರಂಗ ಶರ್ಮಾ ಉಪ್ಪಂಗಳ ಹಾಗೂ ಸ್ಮಿತಾ ದಂಪತಿ ಪುತ್ರ ಹಾಗೂ ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು ಇವರ ಶಿಷ್ಯ. ಜಿಲ್ಲಾ ಪ್ರೌಢಶಾಲಾ ವಿಭಾಗದ ಹುಡುಗರ ‘ಗಾನಾಲಾಪನ’ ಹಾಗೂ ‘ಅಷ್ಠಪದಿ’ ಸ್ಪರ್ಧೆಯಲ್ಲೂ ‘ಎ’ ಗ್ರೇಡ್ ಲಭಿಸಿದೆ.