HEALTH TIPS

ಸಮಾಜವನ್ನು ಜಾತಿ, ಧರ್ಮದ ಮೇಲೆ ವಿಭಜಿಸುವವರು ರಾವಣ, ದುರ್ಯೋಧನರಂತೆ:ಆದಿತ್ಯನಾಥ್‌

            ಗೋರಖ್‌ಪುರ: ಸಮಾಜವನ್ನು ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ವಿಭಜಿಸುವವರು 'ರಾವಣ' ಮತ್ತು 'ದುರ್ಯೋಧನ'ರಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ.

          ಗೋರಖ್‌ಪುರದ ವಂಟಂಗಿಯ ಗ್ರಾಮದ ಅರಣ್ಯವಾಸಿಗಳೊಂದಿಗೆ ದೀಪಾವಳಿ ಆಚರಿಸಿದ ಬಳಿಕ ಮಾತನಾಡಿದ ಅವರು, ಕೆಲವರು ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ದ್ವೇಷವನ್ನು ಬಿತ್ತುತ್ತಾರೆ.

ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆಗೆ ಯತ್ನಿಸುತ್ತಾರೆ. ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳು ರಾಮಾಯಣದ 'ರಾವಣ' ಹಾಗೂ ಮಹಾಭಾರತದ 'ದುರ್ಯೋಧ'ನಂತೆ ಎಂದು ಆದಿತ್ಯನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

             ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಮಹಿಳೆಯ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಸಮಾಜದ ವಿಭಜಕ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಇರುವಂತೆ ಆದಿತ್ಯನಾಥ್‌ ಮನವಿ ಮಾಡಿದ್ದಾರೆ.

                ಈ ಹಿಂದೆ ರಾಜ್ಯದಲ್ಲಿ ಬಡವರ ಭೂಮಿಗಳನ್ನು ಕಸಿದುಕೊಳ್ಳಲಾಗುತ್ತಿತ್ತು. ಮಹಿಳೆಯ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿತ್ತು. ಉದ್ಯಮಿಗಳನ್ನು ರಸ್ತೆ ಮೇಲೆ ಗುಂಡುಕ್ಕಿ ಕೊಲ್ಲುತ್ತಿದ್ದರು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries