ತಿರುವನಂತಪುರಂ: ಹಿಂಗಾರು ಆರಂಭವಾಗಿದ್ದರೂ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ.
ನವೆಂಬರ್ ಆರಂಭದಲ್ಲಿ ಮಳೆ ಭಾರೀ ಪ್ರಮಾಣದಲ್ಲಿರಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರತ್ಯೇಕವಾದ ಭಾರೀ ಮಳೆ ರಾಜ್ಯದಲ್ಲಾಗಿಲ್ಲ. ಇತ್ತೀಚೆಗಿನ ಹವಾಮಾನ ಮುನ್ಸೂಚನೆ ನೋಡಿದರೆ ರಾಜ್ಯದಲ್ಲಿ ನ.10ರವರೆಗೆ ಮಳೆಯ ಅಬ್ಬರ ಅಷ್ಟೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವೆಂದರೆ ಇಂದು ರಾಜ್ಯದ ಯಾವುದೇ ಜಿಲ್ಲೆಯಲ್ಲೂ ವಿಶೇಷ ಮಳೆ ಎಚ್ಚರಿಕೆ ಇಲ್ಲ. ಆದರೆ ನಾಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮುಂದಿನ 5 ದಿನಗಳವರೆಗೆ ಯೆಲ್ಲೋ ಎಚ್ಚರಿಕೆ:
08/11/2024: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ
09/11/2024 : ತಿರುವನಂತಪುರಂ, ಕೊಲ್ಲಂ, ಪತ್ತÀನಂತಿಟ್ಟ, ಇಡುಕ್ಕಿ
10/11/2024: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಭಾರಿ ಮಳೆ ಎಂದರೆ 24 ಗಂಟೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ.