ನೀಲೇಶ್ವರ: ನೀಲೇಶ್ವರದ ಅಂಜುತಂಬಲಂನ ವೀರಾರ್ ಕಾವ್ ಕ್ಷೇತ್ರದಲ್ಲಿ ನಡೆದಿದ್ದ ಪಟಾಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಕಿಣವೂರು ಮೂಲದ ರಜಿತ್(24) ಮೃತರು.
ಇದರೊಂದಿಗೆ ನೀಲೇಶ್ವರದ ಪಟಾಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿನವೂರಿನ ಮುಂಡೋತ್ ಕುಂಞÂ್ಞ ರಾಮನ್ ಮತ್ತು ಉಷಾ ದಂಪತಿಯ ಪುತ್ರ ರಜಿತ್ (28) ಮೃತಪಟ್ಟಿದ್ದಾರೆ.
ರಜಿತ್ ಕಾಸರಗೋಡು ಕೆಎಸ್‍ಇಬಿಯಲ್ಲಿ ಚಾಲಕರಾಗಿದ್ದರು. ರಜಿತ್ ಅವರ ಸ್ನೇಹಿತರಾದ ಕರಿಂದಳದ ಮಂಜಳಕಟ್ಟೆಯ ಬಿಜು, ಕಿನವೂರು ಮೂಲದ ರತೀಶ್ ಮತ್ತು ಸಂದೀಪ್ ಈ ಹಿಂದೆÀ ಮೃತಪಟ್ಟಿದ್ದರು. ಗೆಳೆಯರಾಗಿದ್ದ ಅವರು ಒಟ್ಟಿಗೆ ತೈಯ್ಯಂಕೆಟ್ಟಿಗೆ(ಭೂತಕೋಲ)ತೆರಳಿದ್ದರು. ಇವರಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುರುತ್ತಿ ಒರ್ಕಳಂನ ಶಬಿನ್ ರಾಜ್ (19) ಕೂಡ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ರಜಿತ್ ಅವರ ಪತ್ನಿ ಗೋಪಿಕಾÀಗೆ ಒಂದು ವರ್ಷದ ಮಗುವಿದೆ. ಸಹೋದರರು: ಸಜಿನ್ ಅವರನ್ನು ಅಗಲಿದ್ದಾರೆ.ಅ.28 ರಂದು ರಾತ್ರಿ ಘಟನೆ ನಡೆದಿತ್ತು.