HEALTH TIPS

ಕುಮಾರಮಂಗಲ ಧನ್ವಂತರಿ ಶ್ರೀವನದಲ್ಲಿ ಧÀನ್ವಂತರೀ ಪೂಜೆ

ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಾಪುರ ಮಠದ ಧನ್ವಂತರಿ ಶ್ರೀವನ ಕುಮಾರಮಂಗಲದಲ್ಲಿ ಭಾನುವಾರ ಶ್ರೀ ಧನ್ವಂತರಿ ಪೂಜೆ ನಡೆಯಿತು. ಬೆಳಗ್ಗೆ ದೀಪಪ್ರಜ್ವಲನೆ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪೂಜಾಸೇವೆಗೈದವರು ಪೂಜಾಸಂಕಲ್ಪ ಕೈಗೊಂಡರು. ಮುಳ್ಳೇರಿಯ ಮಂಡಲ ಧರ್ಮಕರ್ಮ ಸಂಯೋಜಕ ಕೇಶವ ಪ್ರಸಾದ ಕೂಟೇಲು ಅವರ ಮಾರ್ಗದರ್ಶನದಲ್ಲಿ ಪೂಜೆ ನಡೆಯಿತು.


ಮುಳ್ಳೇರಿಯ ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್ಟ, ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಜಯದೇವ ಖಂಡಿಗೆ, ಮಾತೃವಿಭಾಗÀದ ಈಶ್ವರಿ ಬೇರ್ಕಡವು, ಜ್ಯೋತಿಷಿ ಪುದುಕೋಳಿ ಕೃಷ್ಣಮೂರ್ತಿ, ವೇದಮೂರ್ತಿ ರಾಮಚಂದ್ರ ಭಟ್ ಕೋಡಿಯಡ್ಕ, ಡಾ. ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ, ಕುಸುಮ ಪೆರ್ಮುಖ, ಧನ್ವಂತರಿ ಶ್ರೀವನದ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ, ಸಂಚಾಲಕ ಗೋವಿಂದ ಬಳ್ಳಮೂಲೆ, ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಶಿಷ್ಯವೃಂದದವರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಧನ್ವಂತರಿ ಶ್ರೀವನಕ್ಕೆ ಸ್ಥಳದಾನಗೈ`ದ ಮಧುುರಕಾನನ ಕುಟುಂಬದವರ ಪರವಾಗಿ ರಾಮಚಂದ್ರ ಭಟ್ ದಂಪತಿಗಳು ಪೂಜಾಕರ್ತೃಗಳಾಗಿ ಪಾಲ್ಗೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries