ಕಾಸರಗೋಡು: ಸಹ ಜೀವನ ಹಾಗು ಜೀವನದಲ್ಲಿ ಸಹನೆ ಅಳವಡಿಸಿಕೊಳ್ಳಬೇಕಾದರೆ ಸಾಂಸ್ಕøತಿಕ ವೈವಿಧ್ಯತೆ ಸಂರಕ್ಷಣೆ ಅನಿವಾರ್ಯವೆಂದು ಕುಪ್ಪಂ ಡ್ರಾವಿಡ ವಿಶ್ವವಿದ್ಯಾಲಯದ ಸೋಶ್ಯಲ್ ಸಯನ್ಸ್ ಡೀನ್ ಪ್ರೊ.ಎಂ.ಎನ್.ವೆಂಕಟೇಶ್ ಹೇಳಿದರು.
ಅವರು ಕೇರಳ ಕೇಂದ್ರ ವಿಶ್ವವಿದ್ಯಾಲಯ, ಪೋಕ್‍ಲ್ಯಾಂಡ್ ತೃಕ್ಕರಿಪುರ, ಕಣ್ಣೂರು ವಿಶ್ವವಿದ್ಯಾಲಯ ಬಹುಭಾಷಾ ಅಧ್ಯಯನ ಕೇಂದ್ರ, ನಾಟ್ಯ ರತ್ನ ಕಣ್ಣೂರು ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಂಸ್ಕøತಿಕ ವೈವಿಧ್ಯತೆ ಸಂರಕ್ಷಣೆ ಎಂಬ ವಿಷಯದ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಡಾ.ವಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎಂ.ಶ್ರೀಧರನ್ ಅವಲೋಕನಗೈದರು. ಪ್ರೊ.ಕೆ.ಕಮಲಾಕ್ಷ ಪ್ರಮಾಣ ಪತ್ರ ವಿತರಿಸಿದರು. ಡಾ.ಆರ್.ಚಂದ್ರಬೋಸ್ ಕೆ, ಸುರೇಶ್ ಮಾತನಾಡಿದರು. ಆ ಬಳಿಕ ಪ್ರದರ್ಶನಗೊಂಡ ಕೋಟಯ್ಕಲ್ ಉಣ್ಣಿಕೃಷ್ಣನ್ ನೇತೃತ್ವದ ತಂಡದಿಂದ ಕಥಕ್ಕಳಿ-ಯಕ್ಷಗಾನ ಬಗ್ಗೆ ವಿಚಾರ ಮಂಥನ ನಡೆಯಿತು. ಪ್ರೊ.ಕೃಷ್ಣಯ್ಯ, ಡಾ.ವಿ.ಪಿ.ರಾಘವನ್, ಪ್ರೊ.ಸಿನಿ ಎಂ, ಸಂದಾಲ್ ಜುಮೆಲ್, ಡಾ.ಕೆ.ಎಂ.ಅರವಿಂದಾಕ್ಷನ್ ಮಾತನಾಡಿದರು. ಡಾ.ದೇವಿ ಕಾರ್ಯಕ್ರಮ ಸಂಯೋಜಿಸಿದರು.