HEALTH TIPS

ವಯನಾಡ್ ಮತದಾನ: ಭೂಕುಸಿತದಿಂದ ಚದುರಿ ಹೋಗಿದ್ದವರ ಭೇಟಿ; ಭಾವುಕರಾದ ಸಂತ್ರಸ್ತರು

 ಯನಾಡ್‌: ಚುನಾವಣೆ ನಡೆಯುತ್ತಿರುವ ವಯನಾಡ್‌ನ ಮತಗಟ್ಟೆಗಳು ಮನಕಲಕುವ ದೃಶ್ಯಗಳಿಗೆ ಸಾಕ್ಷಿಯಾಗಿವೆ. ಭೂಕುಸಿತ ಸಂಭವಿಸಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದ ಜನರು ಮತಗಟ್ಟೆಗಳಲ್ಲಿ ಸಂಬಂಧಿಗಳನ್ನು, ಸ್ನೇಹಿತರನ್ನು ಕಂಡು ಭಾವುಕರಾದರು, ಪರಸ್ಪರ ಅಪ್ಪಿಕೊಂಡು ಕಣ್ಣೀರಾದರು.

ಜುಲೈನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ವಯನಾಡ್‌ನ ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮದ ಜನರು ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಈ ನಡುವೆ ಮತದಾನಕ್ಕೆ ಬಂದಾಗ ಅಕ್ಕಪಕ್ಕದ ಊರಿನ ಜನರನ್ನು ಕಂಡು ಹಳೆಯ ದಿನಗಳನ್ನು ಮೆಲುಕು ಹಾಕಿದರು.


ಧರ್ಮಗಳ ಬೇಧವಿಲ್ಲದೆ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿದ್ದ ದಿನಗಳು, ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿದ್ದ ದಿನಗಳನ್ನು ನೆನೆದು ವೃದ್ಧರೊಬ್ಬರು ಬೇಸರ ವ್ಯಕ್ತಪಡಿಸಿದರು. ವ್ಯಕ್ತಿಯೊಬ್ಬರು ಸ್ನೇಹಿತನನ್ನು ಅಪ್ಪಿಕೊಂಡು, 'ಅಳಬೇಡ, ಎಲ್ಲವೂ ಸರಿಹೋಗುತ್ತದೆ' ಎಂದು ಸಂತೈಸಿದರು.

'ಭೂಕುಸಿತದ ನಂತರ ಬದುಕುಳಿದವರನ್ನು ಜಿಲ್ಲೆಯ ವಿವಿಧ ಭಾಗಗಳಿಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದಾರೆ. ಹೀಗಾಗಿ ನಮ್ಮವರನ್ನು ಕಂಡಾಗ ಹೇಗಿದ್ದೀರಿ ಎಂದು ಕೇಳಿಲ್ಲ, ಎಲ್ಲಿ ವಾಸಿಸುತ್ತಿದ್ದೀರಿ ಎಂದು ಮೊದಲು ಕೇಳಿದ್ದು' ಎಂದು ಮಹಿಳೆಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಭೂಕುಸಿತದಿಂದ ಬದುಕುಳಿದು ವಿವಿಧ ಪ್ರದೇಶಗಳಲ್ಲಿ ತಾತ್ಕಾಲಿಕ ಸ್ಥಳದಲ್ಲಿ ವಾಸಿಸುತ್ತಿರುವ ಜನರಿಗೆ ಮತಗಟ್ಟೆಗಳನ್ನು ತಲುಪಲು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದೆ.

ಜುಲೈ 30ರಂದು ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, 200ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ನೂರಾರು ಜನ ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries