ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೀಡಿದ ಧನಸಹಾಯವನ್ನು ಬುಧವಾರ ಶ್ರೀಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ. ಮುಖೇಶ್, ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಕಾರಡ್ಕ ವಲಯ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ತಾಲೂಕು ಅಧ್ಯಕ್ಷ ಡಾ. ಶ್ರೀನಾಥ್, ಸುಮಲತ, ಪುಷ್ಪ ಜೊತೆಗೂಡಿ 5 ಲಕ್ಷ ರೂ.ಗಳ ಚೆಕ್‍ನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಗಳಾದ ಪಿ.ಆರ್.ಸುನಿಲ್, ರವಿಶಂಕರ್ ವಾಲ್ತಾಜೆ, ಕೋಶಾಧಿಕಾರಿ ರಾಮಚಂದ್ರ ವೋರ್ಕೋಡ್ಲು ಇವರಿಗೆ ನೀಡಿದರು. ಪಿ. ಪುರುಷೋತ್ತಮನ್, ಪಿ. ಗೋಪಾಲಾಚಾರಿ, ಸಂತೋಷ್ ಚಂದ್ರಂಪಾರೆ, ಸೇತುನಾತ್ ಚಂದ್ರಂಪಾರೆ, ಉಣ್ಣಿಕೃಷ್ಣನ್ ಬಿ., ನಾರಾಯಣ ಅರ್ಲಡ್ಕ, ಸೀತಾರತ್ನ ಪಿ., ಭಾಸ್ಕರನ್ ಜಾತಿಕ್ಕಾಡು, ಪಿ.ಆರ್. ಗೋಪಾಲನ್ ಹಾಗೂ ಭಗವದ್ಭಕ್ತರು, ಕಾರ್ಯಕರ್ತರು ಪಾಲ್ಗೊಂಡಿದ್ದರು.