ತಿರುವನಂತಪುರ: ಸಾರ್ವಜನಿಕರು ತಮ್ಮ ಪಡಿತರ ಚೀಟಿಗಳಲ್ಲಿನ ದೋಷಗಳನ್ನು ತೆಲಿಮಾ ಯೋಜನೆಯ ಮೂಲಕ ಉಚಿತವಾಗಿ ಸರಿಪಡಿಸುವ ಅವಕಾಶವನ್ನು ಗರಿಷ್ಠ ಬಳಸಿಕೊಳ್ಳಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಜಿ.ಆರ್.ಅನಿಲ್ ಹೇಳಿರುವರು.
ಪಡಿತರ ಚೀಟಿಗಳನ್ನು ದೋಷರಹಿತವಾಗಿಸುವ ಉದ್ದೇಶದಿಂದ ರಾಜ್ಯಮಟ್ಟದ ತೇಲಿಮಾ ಯೋಜನೆಯನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ನವೆಂಬರ್ 15 ರಿಂದ ಡಿಸೆಂಬರ್ 15 ರವರೆಗೆ ಪಡಿತರ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಮತ್ತು ಆಧಾರ್ ಸಂಖ್ಯೆ ಸೇರಿಸಲು ಸಾರ್ವಜನಿಕರಿಗೆ ಅವಕಾಶವಿದೆ. 96 ಲಕ್ಷ ಕುಟುಂಬಗಳು ತೆÉಲಿಮಾ ಯೋಜನೆಯಿಂದ ಪ್ರಯೋಜನ ಪಡೆಯಲಿವೆ. ಹೆಸರು, ವಯಸ್ಸು, ವಿಳಾಸ ಮತ್ತು ಕಾರ್ಡ್ ಹೋಲ್ಡರ್ ಮತ್ತು ಸದಸ್ಯರೊಂದಿಗಿನ ಸಂಬಂಧದಂತಹ ಮಾಹಿತಿಯಲ್ಲಿನ ದೋಷಗಳನ್ನು ಸರಿಪಡಿಸಬಹುದು. ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಇರಿಸಲಾಗಿರುವ ಬಾಕ್ಸ್‍ಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಜಮಾ ಮಾಡಿದರೆ ಸಾಕು. ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ತಪ್ಪುಗಳನ್ನು ಸರಿಪಡಿಸಿ ಕಾರ್ಡ್ ನೀಡಲಾಗುವುದು. ಅಡುಗೆ ಅನಿಲ ಜಾಡಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕದ ವಿವರಗಳನ್ನು ಕಾರ್ಡ್‍ಗೆ ಸೇರಿಸಬಹುದು. ಅನರ್ಹವಾಗಿ ಹೊಂದಿರುವ ಆದ್ಯತೆ/ಎಎವೈ ಕಾರ್ಡ್‍ಗಳ ಬಗ್ಗೆ ದೂರುಗಳನ್ನು ಸಹ ಈ ರೀತಿಯಲ್ಲಿ ಸಲ್ಲಿಸಬಹುದು ಎಂದು ಸಚಿವರು ಹೇಳಿರುವರು.