ಪೆರ್ಲ: ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ. 11ರಿಂದ ನಡೆಯಲಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಮೆರವಣಿಗೆ ಪೆರ್ಲ ಪೇಟೆ ಹಾಗೂ ಮಣಿಯಂಪಾರೆ-ಶೇಣಿಯಲ್ಲಿ ಜರುಗಿತು.
ಪೆರ್ಲ ಸಾಂತ್ವನ ಬಡ್ಸ್ ಶಾಲಾ ವಿಶೇಷ ವಿದ್ಯಾರ್ಥಿಗಳು ಧ್ವಜವನ್ನು ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕಾಸರಗೋಡು ಜಿಪಂ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಬಟ್ಟು ಶೆಟ್ಟಿ ಕಾಟುಕುಕ್ಕೆ, ಅನಿಲ್ ಕುಮಾರ್, ಎಣ್ಮಕಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಲಾ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶೇಣಿ ಶಾಲಾ ಪ್ರಾಂಶುಪಾಲ ಶಾಸ್ತಾಕುಮಾರ್ ಎ. ಸ್ವಾಗತಿಸಿದರು. ಅಶ್ರಫ್ ಮತ್ರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆಕರ್ಷಕ ಗೊಂಬೆ ಕುಣಿತ, ಸಿಂಗಾರಿ ಚೆಂಡೆಮೇಳ, ಮುತ್ತುಕೊಡೆ, ಯಕ್ಷಗಾನ, ಭರತನಾಟ್ಯ, ದಫ್‍ಮುಟ್ಟು, ಒಪ್ಪನ ವೇಷಧಾರಿಗಳು, ಕುಟುಂಬಶ್ರೀ ಸದಸ್ಯರು ಮೆರವಣಿಗೆಯಲ್ಲಿ ಪಆ ಲ್ಗೊಂಡಿದ್ದರು. ಶಾಲಾ ಕಲೋತ್ಸವ ನ. 11, 12 ಹಾಗೂ 18ರಿಂದ 20ರ ವರೆಗೆ ಜರುಗಲಿದೆ. 11 ಮತ್ತು 12ರಂದು ವೇದಿಕೇತರ ಸ್ಪರ್ಧೆ ನಡೆಯಲಿದ್ದು, 18ರಿಂದ ನಡೆಯುವ ವೇದಿಕೆ ಸ್ಪರ್ಧೆಗಳನ್ನು ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸುವರು.
ಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಪುರ್ವಭಾವಿಯಾಗಿ ಪೆರ್ಲ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಿತು.