ರೋಮ್: ಪಶ್ಚಿಮ ಏಷ್ಯಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸುವುದನ್ನು ಭಾರತವು ಬೆಂಬಲಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ರೋಮ್‌ನಲ್ಲಿ ಮಾತನಾಡಿದ ಅವರು, 'ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಕಡೆಗಣಿಸಲಾಗುವುದಿಲ್ಲ. ಮಿಲಿಟರಿ ಕಾರ್ಯಾಚರಣೆಯಲ್ಲಿ ಸಂಭವಿಸಿದ ಹೆಚ್ಚಿನ ನಾಗರಿಕರ ಸಾವು-ನೋವು, ಭಯೋತ್ಪಾದನೆ ಮತ್ತು ಒತ್ತೆಯಾಗಿಟ್ಟುಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಭಾರತ ಪರಿಗಣಿಸುತ್ತದೆ' ಎಂದು ಹೇಳಿದರು.
ಈಗಿರುವ ಪರಿಸ್ಥಿತಿಯಲ್ಲಿ ನಾವೆಲ್ಲರೂ ಕದನ ವಿರಾಮವನ್ನು ಬೆಂಬಲಿಸಬೇಕು. ಪ್ಯಾಲೆಸ್ಟೀನ್ ಜನರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು 'ಎರಡೂ ರಾಷ್ಟ್ರಗಳಿಗೆ ಪರಿಹಾರ' ಸಿಗುವುದರ ಪರವಾಗಿ ಭಾರತ ಇದೆ ಎಂದರು.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ವಿಸ್ತರಣೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈಶಂಕರ್, 'ತಾಳ್ಮೆಯನ್ನು ಕಾಯ್ಡುಕೊಳ್ಳುವಂತೆ ಭಾರತವು ಇಸ್ರೇಲ್ ಮತ್ತು ಇರಾನ್‌ಗೆ ಹೇಳುತ್ತ ಬಂದಿದೆ. ಎರಡೂ ದೇಶಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ' ಎಂದರು.