ತಿರುವನಂತಪುರ: ಶ್ರೀಪದ್ಮನಾಭಸ್ವಾಮಿ ದೇವಸ್ಥಾನದ ಪರಮೇಶ್ವರ ಬ್ರಹ್ಮಾನಂದ ತೀರ್ಥರು ಸಮಾಧಿಯಾಗಿದ್ದಾರೆ. ಪುಷ್ಪಾಂಜಲಿ ಸ್ವಾಮಿಯಾರ್ (66) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪರಮೇಶ್ವರ ಬ್ರಹ್ಮಾನಂದ ತೀರ್ಥರು ಶ್ರೀಪದ್ಮನಾಭಸ್ವಾಮಿ ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರು. ಆರ್‍ಸಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಮೃತಪಟ್ಟಿದ್ದಾರೆ.
ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಪುಷ್ಪಾಂಜಲಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸುವ ಹಕ್ಕು ಮುಂಚಿರಮಠ ಮೂಪಿಲ್ ನ ಸ್ವಾಮಿಯಾರ್ ಹಾಗೂ ನಡುವಿಲ್ ಮಠದ ಮೂಪಿಲ್ ಸ್ವಾಮಿಯವರಿಗೆ ಸೇರಿದೆ. ಅವರವರ ಸರದಿಯಂತೆ ಇಬ್ಬರೂ ದೇವಸ್ಥಾನದಲ್ಲಿ ಪುಷ್ಪಾಂಚಲಿ ಸ್ವಾಮಿಗಳಾಗಿ ಪೂಜೆ ಸಲ್ಲಿಸುತ್ತಿದ್ದರು. ಮುಂಚಿರಮಠ ಅವರು ಪರಂಪರೆಯಲ್ಲಿ 47ನೇ ಸ್ವಾಮಿ. ಬುಧವಾರ ಇರಿಂಞಲಕುಡ ಅವಿತ್ತತ್ತೂರು ಮಠ ತಲುಪಿದ ಬಳಿಕ ಸಮಾಧಿಕ್ರಿಯೆಗಳು ಆರಂಭವಾಗಲಿವೆ.
ದೇವಾಲಯದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಎತ್ತರಯೋಗದ ನೇತೃತ್ವವನ್ನು ಪುμÁ್ಪಂಜಲಿ ಸ್ವಾಮಿಗಳು ವಹಿಸಿ, ಉತ್ಸವಕ್ಕೆ ಅನುಮೋದನೆ ನೀಡುವ ಹಕ್ಕಿದ್ದವರು. ಶಂಕರಾಚಾರ್ಯರ ಶಿಷ್ಯರು ತ್ರಿಶೂರಿನಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದರು. ಅವುಗಳೆಂದರೆ ದಕ್ಷಿಣ ಮಠ, ಉತ್ತರ ಮಠ, ಮಧ್ಯ ಮಠ, ಪೂರ್ವ ಮಠ. ಇದರ ನಡುವೆ ಮಠ ತೃಕ್ಕೈಕಾಟ್ ಮಠವಾಯಿತು. ಮುಂಚಿರಮಠವು ಈ ಮಠದ ಒಂದು ಶಾಖೆಯಾಗಿದೆ.
ಚಾಲಕ್ಕುಡಿ ತಿರುತ್ತಪ್ಪರಂ ತಿರುತುರ್ಮನ ಸದಸ್ಯರಾಗಿದ್ದರು. ಅವರು ಕೇಂದ್ರ ಎಸ್‍ಸಿ ಎಸ್‍ಟಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2000 ರಲ್ಲಿ ಸ್ವಯಂಪ್ರೇರಣೆಯಿಂದ ಕೆಲಸದಿಂದ ನಿವೃತ್ತರಾದ ನಂತರ, ಅವರು 2016 ರಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದಿದ್ದರು.