ತಿರುವನಂತಪುರಂ: ಕೇರಳದ ಜನ್ಮದಿನದಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿತರಿಸಿದ ಪೋಲೀಸ್ ಪದಕವು ಅಕ್ಷರ ದೋಷಗಳಿಂದ ಕೂಡಿದೆ ಎಂದು ದೂರಲಾಗಿದೆ.
ಅರ್ಧದಷ್ಟು ಜನರ ಪದಕದಲ್ಲಿ 'ಮುಖ್ಯಮಂತ್ರಿಗಳ ಪೋಲೀಸ್ ಪದಕ'ಕ್ಕೆ 'ಮುಖ್ಯಮಂತ್ರಿಯವರ ಪೌಲಸ್' ಎಂದು ಕೆತ್ತಲಾಗಿದೆ.
ಅಕ್ಷರ ದೋಷಗಳಿಂದ ಕೂಡಿದ ಫಲಕ ತಿರುವನಂತಪುರಂನ ಎಸ್ ಎಪಿ ಮೈದಾನದಲ್ಲಿ ವಿತರಣಾ ಸಮಾರಂಭ ನಡೆಯಿತು. 264 ಪೋಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳೇ ಪದಕ ಪ್ರದಾನ ಮಾಡಿದ್ದು, ಮುಖ್ಯಮಂತ್ರಿ ಅವರ ಅಧೀನದಲ್ಲಿರುವ ಗೃಹ ಇಲಾಖೆ ಗಂಭೀರ ಎಸಗಿರುವ ಲೋಪವನ್ನು ಪತ್ತೆ ಹಚ್ಚಲು ಅಥವಾ ಸರಿಪಡಿಸಲು ಸಾಧ್ಯವಾಗಿಲ್ಲ ಎಂಬ ಆರೋಪವಿದೆ.