ಅಹಮದಾಬಾದ್: ಮಧ್ಯಪ್ರದೇಶದ ವಲಸೆ ಕಾರ್ಮಿಕ ದಂಪತಿಯ 2ರಿಂದ 7 ವಯಸ್ಸಿನ ನಾಲ್ವರು ಪುಟ್ಟ ಮಕ್ಕಳು ಇಲ್ಲಿನ ಭೂಮಾಲೀಕನ ಕಾರಿನಲ್ಲಿ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟ ವಲಸೆ ಕಾರ್ಮಿಕ ದಂಪತಿಯ ನಾಲ್ವರು ಮಕ್ಕಳು
0
ನವೆಂಬರ್ 05, 2024
Tags
ಅಹಮದಾಬಾದ್: ಮಧ್ಯಪ್ರದೇಶದ ವಲಸೆ ಕಾರ್ಮಿಕ ದಂಪತಿಯ 2ರಿಂದ 7 ವಯಸ್ಸಿನ ನಾಲ್ವರು ಪುಟ್ಟ ಮಕ್ಕಳು ಇಲ್ಲಿನ ಭೂಮಾಲೀಕನ ಕಾರಿನಲ್ಲಿ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಸುನಿತಾ (7), ಸಾವಿತ್ರಿ (4), ವಿಷ್ಣು (5) ಹಾಗೂ ಕಾರ್ತಿಕ್ (2) ಮೃತ ಮಕ್ಕಳು. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಭರತ್ ಮಂದಾನಿ ಎನ್ನುವ ಭೂಮಾಲೀನ ಜಮೀನಿನಲ್ಲಿ ಸೋಬಿಯಾ ಮಚ್ಚರ್ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಏಳು ಮಕ್ಕಳಿದ್ದರು.
'ಭರತ್ ಅವರು ಸೋಬಿಯಾ ಅವರ ಮನೆ ಮುಂದೆಯೇ ತಮ್ಮ ಕಾರು ನಿಲ್ಲಿಸಿದ್ದರು. ನಾಲ್ವರು ಮಕ್ಕಳ ಕೈಗೆ ಕಾರಿನ ಕೀ ಸಿಕ್ಕಿದೆ. ಆಟವಾಡಲು ಕಾರಿನೊಳಕ್ಕೆ ಹೋಗಿದ್ದಾರೆ. ಆದರೆ, ಕಾರಿನ ಬಾಗಿಲು ತೆರೆದು ಹೊರಬರಲು ಮಕ್ಕಳಿಗೆ ತಿಳಿಯಲಿಲ್ಲ. ಆದ್ದರಿಂದ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ' ಎಂದು ಪೊಲೀಸರು ಹೇಳಿದರು.
'ದಂಪತಿ ಘಟನಾ ಸ್ಥಳದಿಂದ ದೂರದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳದಲ್ಲಿ ಬೇರೆ ಯಾರೂ ಇಲ್ಲದ ಕಾರಣ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಕೆಲಸದಿಂದ ಸಂಜೆ ವಾಪಸಾದ ಬಳಿಕವಷ್ಟೇ ದಂಪತಿಗೆ ಘಟನೆ ಕುರಿತು ತಿಳಿಯಿತು' ಎಂದರು.