HEALTH TIPS

ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: 'ಕೈ'ಗೆ ರಾಜನಾಥ್ ಸವಾಲು

Top Post Ad

Click to join Samarasasudhi Official Whatsapp Group

Qries

        ರಾಂಚಿ: ಅಧಿಕಾರಕ್ಕೆ ಬಂದರೆ 'ಜಾತಿ ಗಣತಿ' ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, 'ರಾಜಕೀಯ ಲಾಭಕ್ಕಾಗಿ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನವರು ಮಾಡುತ್ತಿರುವ ತಂತ್ರ ಇದು' ಎಂದು ಶುಕ್ರವಾರ ಆರೋಪಿಸಿದರು.

        ಜಾರ್ಖಂಡ್‌ನ ಮಹಾಗಾಮಾದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್‌, ದೇಶದಲ್ಲಿರುವ ಹಲವು ಜಾತಿಗಳು ಮತ್ತು ಉಪಜಾತಿಗಳಿಗೆ ಮೀಸಲಾತಿಯ ಲಾಭಗಳನ್ನು ಹಂಚುವುದಕ್ಕಾಗಿ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸುವಂತೆಯೂ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದರು.

         '2011ರಲ್ಲಿ ಸಾಮಾಜಿಕ ಆರ್ಥಿಕ ಜಾತಿ ಗಣತಿ ನಡೆಸಲಾಗಿದೆ. 46 ಲಕ್ಷ ಜಾತಿಗಳು, ಉಪಜಾತಿಗಳು ಮತ್ತು ಗೋತ್ರಗಳಿರುವುದು ಅವರಿಂದ ತಿಳಿದುಬಂದಿದೆ. ಸಮಾಜ ಕಲ್ಯಾಣ ಸಚಿವಾಲಯದ ಪ್ರಕಾರ, ದೇಶದಲ್ಲಿ 1,200 ಪರಿಶಿಷ್ಟ ಜಾತಿಗಳಿವೆ, 750 ಪರಿಶಿಷ್ಟ ಪಂಗಡಗಳಿವೆ ಮತ್ತು 2,500ದಷ್ಟು ಇತರ ಹಿಂದುಳಿದ ವರ್ಗಗಳಿವೆ. ಇಷ್ಟೊಂದು ಗುಂಪುಗಳಿಗೆ ಕಾಂಗ್ರೆಸ್‌ ಯಾವ ರೀತಿ ಮೀಸಲಾತಿ ಕೋಟಾಗಳನ್ನು ಹಂಚಿಕೆ ಮಾಡುತ್ತದೆ' ಎಂದು ಅವರು ಪ್ರಶ್ನಿಸಿದರು.

        'ಅಂತಹ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ ಸ್ಪಷ್ಟವಾದ ನೀಲನಕ್ಷೆಯನ್ನು ಮುಂದಿಡಬೇಕು' ಎಂದೂ ರಾಜನಾಥ್‌ ಸಿಂಗ್‌ ಆಗ್ರಹಿಸಿದರು.

            ಕಾಂಗ್ರೆಸ್‌ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, 'ಬಿಹಾರದಲ್ಲಿ ಆರ್‌ಜೆಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ನಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಆ ಪಕ್ಷಗಳನ್ನು ನಾಶ ಮಾಡಿದೆ. ಈಗ ತಮಿಳುನಾಡಿನಲ್ಲಿ ಡಿಎಂಕೆಯನ್ನು ಮುಗಿಸುವುದಕ್ಕೆ ಹೊರಟಿದೆ. ಅಧಿಕಾರಕ್ಕೆ ಏರಲು ಮೈತ್ರಿ ಪಕ್ಷಗಳನ್ನು ಬಳಸಿಕೊಳ್ಳುವ ಕಾಂಗ್ರೆಸ್‌, ಅಂತಿಮವಾಗಿ ತನ್ನ ಮಿತ್ರಪಕ್ಷಗಳಿಗೇ ಹಾನಿ ಮಾಡುತ್ತದೆ' ಎಂದು ದೂರಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries