ತಿರುವನಂತಪುರಂ: ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ 2023ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ಸಮಗ್ರ ಕೊಡುಗೆಗಾಗಿ ಪ್ರೊ.ಐ.ವಿ.ದಾಸ್ ಪ್ರಶಸ್ತಿಗೆ ಎಂ ಲೀಲಾವತಿ ಆಯ್ಕೆಯಾದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಪ್ರಶಸ್ತಿ ಪತ್ರ ಮತ್ತು ಕಂಚಿನ ಸ್ಮರಣಿಕೆ ಒಳಗೊಂಡಿದೆ.
ಪೊನ್ಕುನ್ನಂ ಸೈದ್ ಅವರು ರಾಜ್ಯದ ಅತ್ಯುತ್ತಮ ಗ್ರಂಥಪಾಲಕ ಪಿಎನ್ ಪಣಿಕ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ 50,000, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ.
ಕೊಲ್ಲಂ ಕಟ್ಟಂಬಳಿ ಸನ್ಮಾರ್ಗದಾಯಿನಿ ಯುವಜನ ಗ್ರಂಥಾಲಯವು ಅತ್ಯುತ್ತಮ ಗ್ರಂಥಾಲಯಕ್ಕೆ ನೀಡಿವ 50 ವರ್ಷಗಳ ನಂತರ ಕೇರಳ ರಾಜ್ಯ ಗ್ರಂಥಾಲಯ ಪರಿಷತ್ತಿನ ಇಎಂಎಸ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಕಂಚಿನ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ವಯನಾಡ್ ಕನ್ನಂಕೋಟ್ ನವೋದಯ ಗ್ರಂಥಾಲಯವು ಹಿಂದುಳಿದ ಪ್ರದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಸಾಂಸ್ಕøತಿಕ ಗ್ರಂಥಾಲಯಕ್ಕಾಗಿ ಶಾಂತಿ ಪರಮೇಶ್ವರನ್ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ಪೊಳ್ಳಪೆÇಯಿಲ್‍ನಲ್ಲಿರುವ ಬಾಲಕೈರಳಿ ಗ್ರಂಥಾಲಯಕ್ಕೆ ನೀಡಲಾಗಿದೆ. ಪ್ರಶಸ್ತಿಯು ರೂ 10,001 ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.