ಎರ್ನಾಕುಳಂ: ಮುಖೇಶ್ ಮತ್ತು ಜಯಸೂರ್ಯ ಸೇರಿದಂತೆ ನಟರ ವಿರುದ್ಧ ನೀಡಲಾದ ಕಿರುಕುಳದ ದೂರುಗಳಿಂದ ನಟಿ ಹಿಂದೆ ಸರಿದಿದ್ದಾರೆ. ನಟರ ವಿರುದ್ಧದ ದೂರುಗಳನ್ನು ಹಿಂಪಡೆಯುತ್ತಿರುವುದಾಗಿ ದೂರು ನೀಡಿದ್ದ ನಟಿ ತಿಳಿಸಿದ್ದಾರೆ. ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ವಕೀಲರ ಮೂಲಕ ತಿಳಿಸಿದ್ದಾಳೆ.
ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ನೀಡಿ ವಿಶೇಷ ತನಿಖಾ ತಂಡಕ್ಕೆ ಶೀಘ್ರದಲ್ಲೇ ಇಮೇಲ್ ಕಳುಹಿಸುವುದಾಗಿ ನಟಿ ಹೇಳಿದ್ದಾರೆ.
ಸರ್ಕಾರದಿಂದ ತನಗೆ ಬೆಂಬಲ ಸಿಕ್ಕಿಲ್ಲ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ. ಅವರ ವಿರುದ್ಧದ ಪೋಕ್ಸೊ ಪ್ರಕರಣದ ಸತ್ಯವನ್ನು ಸರ್ಕಾರ ಸಾಬೀತುಪಡಿಸಬೇಕಿತ್ತು. ಇದಕ್ಕೂ ಕೂಡ ಸಿದ್ಧವಾಗಿಲ್ಲ ಎಂದು ಆರೋಪಿಸಿದ್ದಾರೆ. ಮಾಧ್ಯಮಗಳಿಂದಲೂ ಬೆಂಬಲ ಸಿಗದ ಕಾರಣ ದೂರು ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ನಟಿ ಹೇಳಿದ್ದಾರೆ.
ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ, ನಟರಾದ ಶಾಸಕ ಎಂ ಮುಖೇಶ್, ಜಯಸೂರ್ಯ, ಬಾಲಚಂದ್ರ ಮೆನನ್, ಮಣಿಯನ್ಪಿಳ್ಳ ರಾಜು, ಇಡವೇಳ ಬಾಬು ಮುಂತಾದವರ ವಿರುದ್ಧ ನಟಿ ಆರೋಪ ಮಾಡಿದ್ದರು.