ಕಾಸರಗೋಡು :ಕೋಟಿ ಪಂಚಾಕ್ಷರಿ ಜಪಯಜ್ಞದ ಜೆಪಿ ಕಾಲೋನಿ ಪ್ರಾದೇಶಿಕ ಸಮಿತಿಯನ್ನು ಜೆಪಿ ಕಾಲೋನಿ ಕೊರಗಜ್ಜನ ಸನ್ನಿಧಿಯಲ್ಲಿ ರೂಪಿಕರಿಸಲಾಯಿತು.
ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಕಾರ್ಯದರ್ಶಿಯಾಗಿ ಮನೋಜ್ ಇವರನ್ನು ಆಯ್ಕೆ ಮಾಡಲಾಯಿತು ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಶಾರದಾ ವಹಿಸಿದ್ದರು ಕೋಟಿ ಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷರು ಕೆಎನ್ ವೆಂಕಟರಮಣ ಹೊಳ್ಳ ಹಾಗೂ ಪ್ರಧಾನ ಕಾರ್ಯದರ್ಶಿ ಹರೀಶ್ ಕೆಆರ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು ಕ್ಷೇತ್ರದ ಮೊಕ್ತೇಸರ ಬಾಬು ಪೂಜಾರಿ, ಕೊರಗಜ್ಜ ಸೇವಾ ಟ್ರಸ್ಟಿನ ಅಧ್ಯಕ್ಷ ಮಾಧವ ಉಪಸ್ಥಿತರಿದ್ದರು. ಈ ಸಂದರ್ಭ ವಿಜ್ಞಾಪನ ಪತ್ರಿಕೆ ಮತ್ತು ಕೂಪನ್ ಪದಾಧಿಕಾರಿಗಳಿಗೆ ನೀಡಲಾಯಿತು. ನಗರಸಭಾ ಮಾಜಿ ಸದಸ್ಯ ಶಂಕರ ಸ್ವಾಗತಿಸಿ, ಕೃಷ್ಣ ವಂದಿಸಿದರು.