HEALTH TIPS

ಮುನಂಬಮ್ ವಕ್ಫ್ ಭೂ ವಿವಾದ: ಒತ್ತುವರಿ ತೆರವು ಇಲ್ಲ-ಸಿಪಿಎಂ ಭರವಸೆ

 ಪಾಲಕ್ಕಾಡ್ : ವಕ್ಫ್ ಮಂಡಳಿಯ ಕಾನೂನುಬಾಹಿರ ಭೂ ಹಕ್ಕುಗಳ ವಿರುದ್ಧ ಹಲವು ಕುಟುಂಬಗಳು ಹೋರಾಡುತ್ತಿರುವ ಎರ್ನಾಕುಳಂ ಜಿಲ್ಲೆಯ ಕರಾವಳಿ ಕುಗ್ರಾಮ ಮುನಂಬಮ್‌ನಿಂದ ಯಾರನ್ನೂ ತೆರವುಗೊಳಿಸುವುದಿಲ್ಲ ಎಂದು ಕೇರಳದ ಆಡಳಿತಾರೂಢ ಸಿಪಿಎಂ ಭಾನುವಾರ ಹೇಳಿದೆ.

ರೈತರು ಮತ್ತು ದುರ್ಬಲ ವರ್ಗದ ಸಮುದಾಯಗಳ ಬಗ್ಗೆ ಎಡಪಕ್ಷಗಳ ಸರ್ಕಾರಕ್ಕೆ ಇರುವ ಎಡ ಸರ್ಕಾರದ ಬದ್ಧತೆಯ ಮೇಲೆ ಆಧುನಿಕ ಕೇರಳವನ್ನು ನಿರ್ಮಿಸಲಾಗಿದೆ.

ಈ ಬದ್ಧತೆ ನಿರಂತರವಿರಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ.

'ಸಿಪಿಎಂ ಯಾವುದೇ ಒತ್ತುವರಿ ತೆರವಿಗೆ ಬೆಂಬಲ ನೀಡುವುದಿಲ್ಲ. ಕೇರಳದ ಮುನಂಬಮ್‌ನಲ್ಲಿ ಮಾತ್ರವಲ್ಲದೆ, ಯಾರನ್ನೂ ಅವರ ಒತ್ತುವರಿ ಭೂಮಿಯಿಂದ ಹೊರಹಾಕಲು ಬಿಡುವುದಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

'ಮುನಂಬಮ್‌ನಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವುದು ಬಿಜೆಪಿಯ ಉದ್ದೇಶವಾಗಿದೆ. ಸಿಪಿಎಂ ಇದನ್ನು ಸಮರ್ಥವಾಗಿ ಎದುರಿಸಲಿದೆ' ಎಂದು ಗೋವಿಂದನ್ ಹೇಳಿದರು.

ಆದರೆ, ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ವಿಷಯದಲ್ಲಿ ರಾಜ್ಯದ ಬಹುಸಂಖ್ಯಾತ ಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.

'ಕ್ರೈಸ್ತ ಸಮುದಾಯ ಮತ್ತು ರಾಜ್ಯದ ಬಹುಸಂಖ್ಯಾತ ಜನಸಂಖ್ಯೆಯ ಹಿತಾಸಕ್ತಿಗಳನ್ನು ಕಡೆಗಣಿಸಿ, ಕೇಂದ್ರದ ವಕ್ಫ್ ತಿದ್ದುಪಡಿಯ ವಿರುದ್ಧ ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ರಾಜ್ಯ ವಿಧಾನಸಭೆಯಲ್ಲಿ ಜಂಟಿ ನಿರ್ಣಯವನ್ನು ಅಂಗೀಕರಿಸಿವೆ. ಇದರ ಹಿಂದೆ ಕೋಮುವಾದಿ ಅಜೆಂಡಾಗಳಿದ್ದು, ಇದನ್ನು ಕೂಲಂಕಷವಾಗಿ ಪರಿಶೀಲಿಸಬೇಕು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.

2024ರ ವಕ್ಫ್ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ತಳೆದಿರುವ ನಿಲುವಿನ ಬಗ್ಗೆ ಕೇರಳದಲ್ಲಿ ಕ್ರೈಸ್ತರ ಜನಸಂಖ್ಯೆ ಹೆಚ್ಚಿರುವ ಭಾಗಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ ರಾಜಕೀಯ ಪಕ್ಷಗಳ ನಾಯಕರಿಂದ ಈ ಹೇಳಿಕೆಗಳು ಬಂದಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries