ಮಗುವನ್ನು ಹೊಂದಬೇಕು ಎಂಬ ತಮ್ಮ ಆಸೆ ಪೂರೈಸಿಕೊಳ್ಳಲು ಕಾನೂನುಬಾಹಿರ ವಿಧಾನವನ್ನು ಈ ಜೋಡಿ ಅನುಸರಿಸಿದೆ ಎಂದು ಕೋರ್ಟ್ ಇದೇ ವೇಳೆ ಅಭಿಪ್ರಾಯಪಟ್ಟಿದೆ.
ಮಗುವನ್ನು ಹೊಂದುವ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಅರ್ಜಿದಾರರು ಹೆಣ್ಣುಮಗುವನ್ನು ಆಕೆಯ ಪೋಷಕರಿಂದ ದೂರ ಮಾಡಿ, ಸಹ ಆರೋಪಿಗಳ ಜೊತೆ ಸೇರಿಕೊಂಡು ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ' ಎಂದು ನ್ಯಾಯಾಲಯ ಹೇಳಿದೆ.
'ಅಂತಹ ವ್ಯಕ್ತಿಗಳು ದುರದೃಷ್ಟವಶಾತ್ ಸಮಾಜದಲ್ಲಿ ಮತ್ತು ವಿಶೇಷವಾಗಿ ಜೈಲಿನ ಮಿತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಮೇಲ್ನೋಟಕ್ಕೆ ಗಂಭೀರ ಪ್ರಕರಣವಾದ ಇದು ಜಾಮೀನು ನೀಡುವಂತಹುದೇ ಆಗಿದೆ' ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
'ಅರ್ಜಿದಾರರ (ಜೋಡಿ) ವಿರುದ್ಧ ಪ್ರಬಲ ಆರೋಪವಿದ್ದು, ಇತರೆ ಆರೋಪಿಗಳಿಂದ ಅವರು ಬಾಲಕಿಯನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಆದರೂ
ಬಾಲಕಿಯನ್ನು ಶೋಷಣೆ ಮಾಡಿರುವುದು ಕಂಡುಬಂದಿಲ್ಲ. ಸಲಿಂಗಿಗಳಾದ ಮಹಿಳೆಯರು ಮಗುವನ್ನು ಪಡೆಯುವ ಬಯಕೆ ಹೊಂದಿದ್ದರು. ಆದರೆ, ಜೈವಿಕವಾಗಿ ಅದು ಸಾಧ್ಯವಿಲ್ಲ. 'ಸದ್ಯದ ಪರಿಸ್ಥಿತಿಯಲ್ಲಿ ಅವರು ಮಗುವನ್ನು ದತ್ತು ಪಡೆಯುವುದೂ ಸಾಧ್ಯವಿಲ್ಲ' ಎಂದು ಕೋರ್ಟ್ ಹೇಳಿದೆ.ಈ ಪ್ರಕರಣದಲ್ಲಿ ಸಲಿಂಗಿ ಜೋಡಿಯಲ್ಲದೆ ಇತರೆ ಮೂವರು ಆರೋಪಿಗಳೂ ಇದ್ದಾರೆ. ಐದು ವರ್ಷದ ಈ ಮಗುವಿನ ಪೋಷಕರು 2024ರ ಮಾ.24ರಂದು ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದರು. ಮರುದಿನವೇ ಸಲಿಂಗಿಗಳ ಮನೆಯಲ್ಲಿ ಪೊಲೀಸರು ಮಗುವನ್ನು ಪತ್ತೆಹಚ್ಚಿದ್ದರು.