ನವದೆಹಲಿ: ಭಾರತ ಸಂವಿಧಾನವು ಜೀವಂತ ಹಾಗೂ ಪ್ರಗತಿಪರ ದಾಖಲೆಯಾಗಿದೆ. ಈ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿ ಸಾಧಿಸಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಹೇಳಿದ್ದಾರೆ.
ಸಂವಿಧಾನ ಅಂಗೀಕಾರದ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆಗೆ ನೆರವಾದ ಮಹಿಳಾ ಸದಸ್ಯರ ಕೊಡುಗೆಯನ್ನು ಸ್ಮರಿಸಿದರು.
ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಮೀಸಲಾತಿಯ ಕಾನೂನಿಂದಾಗಿ ಮಹಿಳಾ ಸಬಲೀಕರಣದ ಹೊಸ ಯುಗವನ್ನೇ ಪ್ರಾರಂಭಿಸಿದೆ ಎಂದು ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ.
ಮೈತೇಯಿ ಮತ್ತು ಸಂಸ್ಕೃತ ಭಾಷೆಯಲ್ಲಿರುವ ಸಂವಿಧಾನ ಆವೃತ್ತಿಗಳನ್ನು ಮುರ್ಮು ಬಿಡುಗಡೆ ಮಾಡಿದರು.