HEALTH TIPS

Delhi Pollution: ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಶಾಲೆಗೆ ಹೋದರೆ ಆಟವಾಡುವಂತಿಲ್ಲ

         ವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಶಾಲೆಗಳನ್ನು ಆನ್‌ಲೈನ್ ಮೂಲಕವೇ ನಡೆಸುವಂತೆ ದೆಹಲಿ ಶಿಕ್ಷಣ ಇಲಾಖೆ ಸೂಚಿಸಿದೆ.

        ಒಂದೊಮ್ಮೆ 6ನೇ ತರಗತಿ ನಂತರದ ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳನ್ನು ಬಯಸಿದರೆ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು.

         ಶಾಲೆಯ ಮೈದಾನದಲ್ಲಿ ಆಟವಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿದೆ.

ದ್ವಾರಕಾದಲ್ಲಿರುವ ಐಟಿಎಲ್‌ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುಧಾ ಆಚಾರ್ಯ ಅವರು ಈ ಕುರಿತು ಪ್ರತಿಕ್ರಿಯಿಸಿ, 'ಶಾಲೆಗೆ ತೆರಳಿ ತರಗತಿಗಳನ್ನು ಕೇಳುವ ವಿದ್ಯಾರ್ಥಿಗಳಿಗಾಗಿ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಒಳಾಂಗಣದಲ್ಲಿ ಓದುವುದು, ಪೇಯಿಂಟಿಂಗ್, ಕರಕುಶಲ ಕಲೆ ಹಾಗೂ ಚೆಸ್ ಮತ್ತು ಕೇರಂನಂಥ ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ' ಎಂದಿದ್ದಾರೆ.

            'ಪರಿಸರ ಸ್ನೇಹಿ ಹವ್ಯಾಸಗಳನ್ನು ಉತ್ತೇಜಿಸಲಾಗುತ್ತಿದೆ. ಕಾರ್‌ಪೂಲಿಂಗ್‌, ಹೆಚ್ಚು ದ್ರವಪದಾರ್ಥಗಳ ಸೇವನೆ ಹಾಗೂ ಆಯಂಟಿ ಆಕ್ಸಿಡೆಂಟ್ಸ್ ಇರುವ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚು ಇಂಬು ನೀಡಲಾಗುತ್ತಿದೆ. ಎನ್‌95 ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಉಸಿರಾಟದ ಸಮಸ್ಯೆ ಹಾಗೂ ಅಸ್ತಮಾ ಇರುವವರು ಹೆಚ್ಚುವರಿ ಕಾಳಜಿ ವಹಿಸಲು ತಿಳಿಸಲಾಗಿದೆ. ಅಲರ್ಜಿಗೆ ಕಾರಣವಾಗಬಹುದಾದ ಸುಗಂಧ ದ್ರವ್ಯ ಬಳಕೆ ಹಾಗೂ ಬಟ್ಟೆ ಶುಚಿಗೊಳಿಸಲು ಬಳಸುವ ಕ್ಲೀನಿಂಗ್ ಏಜೆಂಟ್‌ಗಳ ಬಳಕೆ ತಪ್ಪಿಸಲು ನಿರ್ದೇಶಿಸಲಾಗಿದೆ' ಎಂದಿದ್ದಾರೆ.

             ದೆಹಲಿಯ ಇಂದ್ರಪ್ರಸ್ಥ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ರಾಜೀವ್ ಹಸ್ಸಿಜಾ ಪ್ರತಿಕ್ರಿಯಿಸಿ, 'ಶಿಕ್ಷಕರು ಶಾಲೆಗೆ ಬಂದು ತರಗತಿಗಳನ್ನು ನಡೆಸುತ್ತಾರೆ. ಮೈಕ್ರೊಸಾಫ್ಟ್‌ ಟೀಮ್ಸ್ ಮತ್ತು ಸ್ಮಾರ್ಟ್‌ಬೋರ್ಡ್‌ಗಳ ಮೂಲಕ ನಡೆಸುವಂತೆ ಹೇಳಲಾಗಿದೆ. ಪ್ರತಿ ತರಗತಿ ನಂತರ 15 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ದ್ರವಾಹಾರ ಸೇವಿಸಲು ಸಲಹೆ ನೀಡಲಾಗಿದೆ' ಎಂದಿದ್ದಾರೆ.

             5ನೇ ತರಗತಿವರೆಗೆ ಆನ್‌ಲೈನ್ ತರಗತಿ ನಡೆಸಲು ದೆಹಲಿ ಮುಖ್ಯಮಂತ್ರಿ ಅತಿಶಿ ಆದೇಶಿಸಿದ್ದಾರೆ. ಈ ಆದೇಶದನ್ವಯ ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಪಾಲಿಕೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

             ಗಾಳಿ ಗುಣಮಟ್ಟ ನಿರ್ವಹಣಾ ಆಯೋಗವು ಗ್ರಾಪ್‌ 3 ಮುಂಜಾಗ್ರತಾ ಕ್ರಮವನ್ನು ಜಾರಿಗೆ ತಂದಿದೆ. ಶುಕ್ರವಾರ ಬೆಳಿಗ್ಗೆ 9ರ ಹೊತ್ತಿಗೆ ಗಾಳಿಯ ಗುಣಮಟ್ಟವು 411ಕ್ಕೆ ತಲುಪಿದ್ದು, ಅಪಾಯದ ಮಟ್ಟ ಮೀರಿದೆ ಎಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries