ಬದಿಯಡ್ಕ : ಕುಂಬ್ಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ನೇತೃತ್ವದಲ್ಲಿ ಕಟ್ಟಗಳ ದಿನಾಚರಣೆ ನ.15 ರಂದು ಏತಡ್ಕ ಸಮಾಜ ಮಂದಿರದಲ್ಲಿ ಆಚರಿಸಲಾಯಿತು. ಸಾಂಪ್ರದಾಯಿಕ ಕಟ್ಟಗಳು ನಮ್ಮ ಹಿರಿಯರಿಂದ ಬಂದ ಬಳುವಳಿ ಎಂದು ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಭಿಪ್ರಾಯಪಟ್ಟರು.
ಡಾ. ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ನಡುಮನೆ, ಅಭ್ಯಾಗತರಾಗಿ ಆಗಮಿಸಿ ನಾಡಿಗೆ ಕಟ್ಟಗಳಿಂದ ಸಿಗುವ ಪ್ರಯೋಜನಗಳನ್ನು ವಿವರಿಸಿದರು. ಊರ ಹಲವು ಪ್ರಮುಖರು ಈ ಸಂದರ್ಭದಲ್ಲಿ ಕಟ್ಟಗಳ ಹಾಗೂ ನೀರು ಸಂಗ್ರಹಣೆಯ ಮಹತ್ವದ ಕುರಿತು ಚರ್ಚಿಸಿದರು. ಕಟ್ಟಗಳ ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕು. ಸಮನ್ವಿತಾ ಪ್ರಾರ್ಥಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕಡೆಕಲ್ಲು, ಏತಡ್ಕ ಸಾಂಪ್ರದಾಯಿಕ ಕಟ್ಟಗಳು ಜಲ ಮರುಪೂರಣಕ್ಕೆ ಸುಲಭದಾರಿ ಎಂದು ತಿಳಿಸಿ, ವಂದಿಸಿದರು.