ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಗೂಗಲ್ ಕೇಶ್‌ಬ್ಯಾಕ್ ಬಂಪರ್ ಗಿಫ್ಟ್ ಕೊಟ್ಟಿದೆ. ದೀಪಾವಳಿ ಹಾಗೂ ವರ್ಷಾಂತಕ್ಕೆ ಇನ್ನೆರಡು ತಿಂಗಳು ಬಾಕಿ ಉಳಿದಿರುವಾಗಲೇ ವಿವಿಧ ಪ್ರತಿಷ್ಠಿತ ಕಂಪನಿಗಳು ಶುಭಕೋರುವುದು, ವಿಶೇಷ ಗಿಫ್ಟ್ ಹಾಗೂ ರಿಯಾಯಿತಿಗಳನ್ನು ಕೊಡ್ತಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಗೂಗಲ್ ಎಲ್ಲಾ ಗೂಗಲ್ ಪೇ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇದರ ಮೂಲಕ ನೀವು ಭರ್ಜರಿ ಕ್ಯಾಶ್ ಬ್ಯಾಕ್ ಪಡೆಯುವುದಕ್ಕೆ ಅವಕಾಶ ಇದೆ. Google Pay ಬಳಕೆದಾರರಿಗೆ ಈಗ ಬರೋಬ್ಬರಿ 1,001 ಕ್ಯಾಶ್‌ಬ್ಯಾಕ್ ಗೆಲ್ಲಲು ಅದ್ಭುತ ಅವಕಾಶ ಬಂದಿದೆ.
ಇದಕ್ಕೆ ಆರು ವಿವಿಧ ಲಡ್ಡು ಗೇಮ್‌ಅನ್ನು ಗೂಗಲ್ ಪರಿಚಯಿಸಿದೆ. ಈ ಕಲರ್ ಲಡ್ಡುಗಳು ಕಲೆಕ್ಟ್ ಆದ ಮೇಲೆ ನಿಮಗೆ Google Pay ಮೂಲಕ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇದನ್ನು ಯಾವ ರೀತಿ ಸಂಗ್ರಹಿಸಬೇಕು ಎನ್ನುವ ಸುಲಭ ವಿಧಾನ ಇಲ್ಲಿದೆ.
ಗೂಗಲ್ ಪೇ ಕ್ಯಾಶ್‌ಬ್ಯಾಕ್ ಆಫರ್ ವಿವರ ಇಲ್ಲಿದೆ
* ಗೂಗಲ್ ಪೇಯ ಅಧಿಕೃತ ಮಾಹಿತಿಯ ಪ್ರಕಾರ, ಯಾರು ಎಲ್ಲಾ ಆರು ಲಡ್ಡುಗಳಲ್ಲಿ ಕನಿಷ್ಠ ಒಂದು ಲಡ್ಡು ಸಂಗ್ರಹಿಸಿದರೆ, ಅವರಿಗೆ 1,001 ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರ ಕನಿಷ್ಠ ಮೊತ್ತ ಅಂದರೆ ಪ್ರಾರಂಭಿಕ ಕ್ಯಾಶ್ ಬ್ಯಾಕ್ 51 ರೂಪಾಯಿ ಇದೆ. 51 ರೂಪಾಯಿಯಿಂದ 1,001 ರೂಪಾಯಿ ವರೆಗೆ ಸಿಗಲಿದೆ.
* ಈ ಕ್ಯಾಶ್‌ಬ್ಯಾಕ್ ಪಡೆಯುವುದಕ್ಕೆ ನೀವು ಗೂಗಲ್ ಪೇ ಮೂಲಕ ಹಣ ವಹಿವಾಟು ಮಾಡಬೇಕು. ಆರು ಲಡ್ಡೂಗಳಲ್ಲಿ ಕನಿಷ್ಠ ಒಂದನ್ನು ಸಂಗ್ರಹಿಸಬೇಕು.
* ಆಟ ಪ್ಲಸ್ ದುಡ್ಡು ಎನ್ನುವಂತಿದೆ ಈ ಕ್ಯಾಶ್‌ಬ್ಯಾಕ್ ಪ್ರಕ್ರಿಯೆ. ನೀವು ಗೂಗಲ್ ಪೇ ಅಲ್ಲಿ ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಿಗೆ ಲಡ್ಡು ಕಳುಹಿಸುವುದು ಅಥವಾ ಪಡೆಯುವುದನ್ನು ಮಾಡಬಹುದು.
ಎಲ್ಲಿಯವರೆಗೆ ಇರಲಿದೆ ಈ ಕ್ಯಾಶ್‌ಬ್ಯಾಕ್
ಗೂಗಲ್ ಕ್ಯಾಶ್ ಬ್ಯಾಕ್ ಈ ಆಪ್ಷನ್ ಈಗಾಗಲೇ ಪ್ರಾರಂಭವಾಗಿದೆ. ಅಕ್ಟೋಬರ್ 21ರಿಂದಲೇ ಪ್ರಾರಂಭವಾಗಿದ್ದು, ನವೆಂಬರ್ 7ರ ವರೆಗೆ ಇರಲಿದೆ. ಅಂದರೆ, ಈ ಅವಧಿಯ ಒಳಗಾಗಿ ನೀವು ಆರು ಲಡ್ಡುಗಳನ್ನು ಸಂಗ್ರಹಿಸಿರಬೇಕು. ನೀವು ಗೂಗಲ್ ಪೇಯನ್ನು ನಿಯಮಿತವಾಗಿ ಬಳಸುತ್ತಿದ್ದರೆ, ಈಗಾಗಲೇ ನಿಮ್ಮ ಬಳಿ ಲಡ್ಡುಗಳು ಸಂಗ್ರಹವಾಗಿರುವ ಸಾಧ್ಯತೆಯೂ ಇದೆ.
ಗೂಗಲ್ ಕ್ಯಾಶ್ ಬ್ಯಾಕ್‌ಗೆ ಲಡ್ಡು ಪಡೆಯುವುದು ಹೇಗೆ ?
ಗೂಗಲ್ ಪೇ ಕ್ಯಾಶ್ ಬ್ಯಾಕ್ ಪಡೆಯುವುದಕ್ಕೆ ಕೇಳಗಿನ ಯಾವುದಾದರೂ ವಹಿವಾಟು ನಡೆಸಿದರೂ ಸಾಕು. ನಿಮಗೆ ಲಡ್ಡುಗಳು ಸಿಗಲಿವೆ.
* ನೀವು ಎಲ್ಲಿಯಾದರೂ ಗೂಗಲ್ ಪೇ ಸ್ಕ್ಯಾನ್ ಮಾಡಿ ಪೇ ಮಾಡಬಹುದು (UPI ಮೂಲಕ ಕನಿಷ್ಠ 100 ರೂ.)
* ಗೂಗಲ್ ಪೇನ ಮೂಲಕ ಮೊಬೈಲ್ ಫೋನ್ ರೀಚಾರ್ಜ್ ಅಥವಾ ಪೋಸ್ಟ್ ಪೇಯ್ಡ್ ಬಿಲ್ ಪಾವತಿ ಮಾಡಬೇಕು (ಇದು ಸಹ ಕನಿಷ್ಠ 100 ರೂಪಾಯಿ)
* ಕ್ರೆಡಿಟ್ ಕಾರ್ಡ್‌ನ ಬಿಲ್ ಪಾವತಿ (ಕನಿಷ್ಠ 3,000 ರೂಪಾಯಿ)
* ಶಾಪಿಂಗ್ ಗಿಫ್ಟ್ ಕಾರ್ಡ್ (ಕನಿಷ್ಠ 200 ರೂಪಾಯಿ)
ಪರಸ್ಪರ ಹಂಚಿಕೊಳ್ಳಬಹುದು: ಇನ್ನು ನೀವು ಈ ಲಡ್ಡುಗಳನ್ನು ಪರಸ್ಪರ ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದು. ಗೂಗಲ್ ಪೇ ಬಳಕೆ ಮಾಡುವವರು ಲಡ್ಡುಗಳನ್ನು ಸ್ನೇಹಿತರಿಗೆ ಉಚಿತವಾಗಿ ಕೊಡಬಹುದು. ಯಾರಿಗೆ ಆರು ಲಡ್ಡು ಮೊದಲು ಸಿಗುತ್ತೋ ಅವರಿಗೆ ಕ್ಯಾಶ್ ಬ್ಯಾಕ್ ಪೇಮೆಂಟ್ ಸಿಗಲಿದೆ. ಇದರಿಂದ ಕ್ಯಾಶ್ ಬ್ಯಾಕ್ ಪಡೆಯಬಹುದು. ಇಲ್ಲವೇ ನಿಮ್ಮಿಷ್ಟದ ಗಿಫ್ಟ್‌ಗಳನ್ನು ಸಹ ನೀವು ಖರೀದಿ ಮಾಡಬಹುದಾಗಿದೆ.