HEALTH TIPS

'ಮಲ್ಲು ಹಿಂದು ಅಧಿಕಾರಿಗಳು' ವಾಟ್ಸ್​ಆಯಪ್​​ ಗ್ರೂಪ್​ ರಚನೆ! IAS ಅಧಿಕಾರಿಯನ್ನು ಅಮಾನತುಗೊಳಿಸಿದ ಕೇರಳ ಸರ್ಕಾರ

 ತಿರುವನಂತಪುರಂ::'ಮಲ್ಲು ಹಿಂದು ಅಧಿಕಾರಿಗಳು​' ಎಂಬ ವಾಟ್ಸ್​ಆಯಪ್​ ಗ್ರೂಪ್​ ರಚಿಸಿದಕ್ಕಾಗಿ ಅಖಿಲ ಭಾರತೀಯ ಆಡಳಿತ ಸೇವಾ (IAS​) ಅಧಿಕಾರಿ ಕೆ.ಗೋಪಾಲಕೃಷ್ಣನ್​ ಅವರನ್ನು ಕೇರಳ ಸರ್ಕಾರ ಮಂಗಳವಾರ(ನ.12) ಅಮಾನತು ಮಾಡಿದೆ.

ತಮ್ಮ ಪೋನ್​ ಹ್ಯಾಕ್​ ಮಾಡಲಾಗಿದೆ ಎಂಬ ಕೆ.ಗೋಪಾಲಕೃಷ್ಣನ್​ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ ನಂತರ ಈ ಕ್ರಮ ಜರುಗಿಸಲಾಗಿದೆ.

ವಾಟ್ಸ್​ಆಯಪ್​​ ಗ್ರೂಪ್​ ರಚನೆಯಿಂದಾಗಿ 'ಅಖಿಲ ಭಾರತ ಸೇವೆಗಳ ಅಧಿಕಾರಿಗಳಲ್ಲಿ ವಿಭಜನೆ, ಭಿನ್ನಾಭಿಪ್ರಾಯ ಬಿತ್ತಲು ಮತ್ತು ಒಗ್ಗಟ್ಟು ಮುರಿಯಲು' ಉದ್ದೇಶಿಸಲಾಗಿದೆ ಎಂದು ಅವರ ಅಮಾನತ್ತಿನ ಆದೇಶದಲ್ಲಿ ತಿಳಿಸಲಾಗಿದೆ.

ಅಪರಿಚಿತ ವ್ಯಕ್ತಿಗಳು ನನ್ನ ಪೋನ್​ ಹ್ಯಾಕ್​ ಮಾಡಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಇಂತಹ ಧಾರ್ಮಿಕ ಗ್ರೂಪ್​ಗಳನ್ನು ರಚಿಸಲಾಗಿದೆ ಎಂದು ಐಎಎಸ್​ ಅಧಿಕಾರಿ ಕೆ.ಗೋಪಾಲಕೃಷ್ಣನ್​ ದೂರು ನೀಡಿದ್ದರು. ಮಲ್ಲು ಹಿಂದು ಅಧಿಕಾರಿಗಳು ಮತ್ತು ಮಲ್ಲು ಮುಸ್ಲಿಂ ಅಧಿಕಾರಿಗಳ ಎಂಬ ಎರಡು ಗ್ರೂಪ್​​ಗಳಿಗೆ ನನ್ನನ್ನು ಅಡ್ಮಿನ್​ ಮಾಡಿದ್ದಾರೆ' ಎಂದು ಅವರು ಹೇಳಿಕೆ ನೀಡಿದ್ದರು.

ಮಲ್ಲು ಹಿಂದು ಅಧಿಕಾರಿಗಳ ಗ್ರೂಪ್​ ಅನ್ನು ಆಕ್ಟೋಬರ್​ 30 ರಂದು ರಚಿಸಲಾಗಿದೆ. ಜತೆಗೆ ಹಲವಾರು ಹಿರಿಯ ಐಎಎಸ್​ ಅಧಿಕಾರಿಗಳನ್ನು ಗ್ರೂಪ್​ಗೆ ಸೇರಿಸಿಕೊಳ್ಳಲಾಗಿದೆ. ಬೇರೆ ಇತರ ಹಿರಿಯ ಅಧಿಕಾರಿಗಳು ಎಚ್ಚರಿಕೆ ಬಳಿಕ ಗ್ರೂಪ್​ ಅಳಸಿ ಹಾಕಲಾಗಿದೆ ಎಂದು ಪೊಲೀಸರ ಮುಂದೆ ಅಧಿಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ, ಈ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿತ್ತು.

ಪೊಲೀಸರು ತನಿಖೆ ಬಳಿಕ ಹೇಳಿದ್ದೇನು?

ತನಿಖೆ ನಡೆಸಿದ ಕೇರಳ ಪೊಲೀಸರ ಹೇಳಿಕೆ ಪ್ರಕಾರ 'ಅವರ ಪೋನ್​ ಹ್ಯಾಕ್​ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಫೋರನ್ಸಿಕ್​ ಲ್ಯಾಬ್​ಗೆ ಕಳಿಸುವ ಮುನ್ನ ಅಧಿಕಾರಿ ಗೋಪಾಲಕೃಷ್ಣನ್​ ಹಲವು ಬಾರಿ ಮೊಬೈಲ್​ ಫೋನ್​ ಅನ್ನು ರೀಸೆಟ್​​ ಮಾಡಿದ್ದಾರೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾರದಾ ಮುರಳಿಧರನ್​ ಅವರ ವರದಿ ಅಧಾರದ ಮೇಲೆ ಅಮಾನತು ಮಾಡಲಾಗಿದೆ. ಗೋಪಾಲಕೃಷ್ಣನ್​ ವಾಣಿಜ್ಯ ಮತ್ತು ಕೈಗಾರಿಗೆ ಇಲಾಖೆಯ ನಿರ್ದೇಶಕರಾಗಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries