ನವದೆಹಲಿ: ವಿಶ್ವ ಪುರುಷರ ದಿನದಂದು ಮಹಿಳಾ ರೂಪದರ್ಶಿಯೊಬ್ಬರು ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ನೃತ್ಯ ಮಾಡುವ ಮೂಲಕ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಮೂಲಗಳ ಪ್ರಕಾರ ಕೋಲ್ಕತ್ತಾ ಮೂಲದ ಮಾಡೆಲ್ ಸನ್ನತಿ ಮಿತ್ರಾ (sannati__) ಎಂಬಾಕೆ ದೆಹಲಿಯ ಪ್ರವಾಸಿ ತಾಣ ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿ ರೀಲ್ಸ್ ಮಾಡಿದ್ದಾರೆ.
ನಿನ್ನೆ ಅಂತಾರಾಷ್ಟ್ರೀಯ ಪುರುಷರ ದಿನದ ಅಂಗವಾಗಿ ಆಕೆ ಈ ರೀಲ್ಸ್ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.
ಅಲ್ಲದೆ ವಿಡಿಯೋದಲ್ಲಿ “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸನ್ನತಿ ಒಂದು ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ಹಿಂದಿ ಹಾಡೊಂದಕ್ಕೆ ಲಿಪ್ ಸಿಂಕ್ ಮಾಡುತ್ತಾ ಡಾನ್ಸ್ ಮಾಡಿದ್ದಾಳೆ.
ವ್ಯಾಪಕ ಆಕ್ರೋಶ
ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಸಾರ್ವಜನಿಕ ಸ್ಥಳದಲ್ಲಿ ಆಕೆ ನಡೆದುಕೊಂಡ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.