ರಾಂಚಿ: ಸಂತಾಲ್ ಪ್ರಾಂತ್ಯದ ಬುಡಕಟ್ಟು ಸಮುದಾಯದ ನಾಯಕ ಮಂಡಲ್ ಮುರ್ಮು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪಾಯಿ ಸೋರೆನ್ ಗುರುವಾರ ಹೇಳಿದ್ದಾರೆ.
ರಾಂಚಿ: ಸಂತಾಲ್ ಪ್ರಾಂತ್ಯದ ಬುಡಕಟ್ಟು ಸಮುದಾಯದ ನಾಯಕ ಮಂಡಲ್ ಮುರ್ಮು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪಾಯಿ ಸೋರೆನ್ ಗುರುವಾರ ಹೇಳಿದ್ದಾರೆ.
ಸೆರೈಕೆಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸೋರೆನ್ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.
ಬಾಂಗ್ಲಾದೇಶದಿಂದ ನುಸುಳುವವರು ಸ್ಥಳೀಯ ಬುಡಕಟ್ಟು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ನಾಮಪತ್ರಕ್ಕೆ ಮಂಡಲ್ ಮುರ್ಮು ಪ್ರಸ್ತಾವಕರಾಗಿ ಸಹಿ ಮಾಡಿದ್ದರು.
ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡುತ್ತಿಲ್ಲ, ಬಾಂಗ್ಲಾದೇಶದಿಂದ ನುಸುಳಿದವರು ರಾಜಕೀಯ ಪ್ರಭಾವ ಬಳಸಿ ಬುಡಕಟ್ಟು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೇ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳ ಅಸ್ತವ್ಯಸ್ತಗೊಂಡಿವೆ ಎಂದು ಅವರು ಆರೋಪ ಮಾಡಿದರು.
ಈ ಹಿನ್ನೆಲೆಯಲ್ಲಿ ಮಂಡಲ್ ಮುರ್ಮು ಬಿಜೆಪಿ ಸೇರಿದ್ದಾರೆ ಎಂದರು.