ತ್ರಿಶೂರ್: ಚೇಲಕ್ಕರದಲ್ಲಿ ಮತ ಎಣಿಕೆ ಮುಗಿಸಿ ಹಿಂತಿರುಗುತ್ತಿದ್ದ ಯುಡಿಎಫ್ ಅಭ್ಯರ್ಥಿ ರಮ್ಯಾ ಹರಿದಾಸ್ ಅವರ ವಾಹನವನ್ನು ಸಿಪಿಎಂ ಕಾರ್ಯಕರ್ತರು ತಡೆ ಹಿಡಿದ ಘಟನೆ ನಡೆದಿದೆ. ಎಡ ಅಭ್ಯರ್ಥಿ ಯು. ಆರ್.ಪ್ರದೀಪ್ ವಿಜಯೋತ್ಸವ ಆಚರಿಸಲು ಬಂದವರು ರಮ್ಯಾ ಅವರನ್ನು ತಡೆದು ಅಣಕಿಸಿ ಘೋಷಣೆ ಕೂಗಿದರು. ರಮ್ಯಾಗೆ ಅವಮಾನ ಆಗಿರುವುದು ಖಚಿತವಾದ ಬಳಿಕ ವಾಹನ ಸಾಗಲು ಅನುವು ಮಾಡಿಕೊಡಲಾಯಿತು.
ಪ್ರಬುದ್ಧತೆ, ಘನತೆ ಮರೆತಿರುವ ಸಿಪಿಎಂ ಕಾರ್ಯಕರ್ತರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಚೇಲಕ್ಕರದಲ್ಲಿ ಪ್ರದೀಪ್ 12,000 ಮತಗಳ ಬಹುಮತದಿಂದ ಗೆದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಹರಿದಾಸ್ ಪರಾಭವಗೊಂಡಿರುವರು.
ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ರಮ್ಯಾ ಹರಿದಾಸ್ ಚೇಲಕರ ಉಪಚುನಾವಣೆಯಲ್ಲೂ ಪರಾಭವಗೊಂಡಿದ್ದರು. ಈ ನಡುವೆ ಸಿಪಿಎಂ ಕಾರ್ಯಕರ್ತರೂ ಅಣಕಿಸಿದ್ದಾರೆ.