ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭಾರಿ ಮುನ್ನಡೆಯಲ್ಲಿದ್ದು, ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಕಂಡುಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, 'ದೇಶದಲ್ಲೆಡೆ ಒಟ್ಟಾರೆ ಟ್ರೆಂಡ್ ಗಮನಿಸಿದರೆ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ' ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಜನರೂ ನಮಗೆ ಆಶೀರ್ವಾದ ಮಾಡಿದ್ದಾರೆ' ಎಂದು ಅವರು ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆ 145 ಆಗಿದೆ.
ಬೆಳಿಗ್ಗೆ 11.50ರ ಟ್ರೆಂಡ್ ವೇಳೆಗೆ ಮಹಾಯುತಿ 215, ಮಹಾ ವಿಕಾಸ ಅಘಾಡಿ 58 ಮತ್ತು ಇತರರು 15 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬೆಳಿಗ್ಗೆ 11.50ರ ಟ್ರೆಂಡ್ ವೇಳೆಗೆ ಮಹಾಯುತಿ 215, ಮಹಾ ವಿಕಾಸ ಅಘಾಡಿ 58 ಮತ್ತು ಇತರರು 15 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಆ ಮೂಲಕ ಮಹಾಯುತಿ ಮೈತ್ರಿ ಭರ್ಜರಿ ಬಹುಮತದತ್ತ ದಾಪುಗಾಲು ಇಟ್ಟಿದೆ. ಮತ್ತೊಂದೆಡೆ ಮಹಾ ವಿಕಾಸ ಅಘಾಡಿ ಮೈತ್ರಿಯು ಮುಖಭಂಗಕ್ಕೊಳಗಾಗಿದೆ.