ನವದೆಹಲಿ: ಚಾಟ್ಜಿಪಿಟಿ ಎಂಬ ಆಧುನಿಕ ಎಐ ತಂತ್ರಜ್ಞಾನ ಇಡೀ ವಿಶ್ವವನ್ನೇ ಬೆರಗುಗೊಳಿಸಿದ್ದು, ತಾಂತ್ರಿಕ ಹಾಗೂ ಸಂಕ್ಷಿಪ್ತ ವಿಷಯಗಳ ವಿವರಗಳಿಗಾಗಿ ಪರದಾಡುತ್ತಿದ್ದ ಜನಸಾಮಾನ್ಯರಿಗೆ ತಮ್ಮ ಬೆರಳಂಚಿನಲ್ಲಿ ಕೆಲಸ ಈಡೇರಿಸಿಕೊಳ್ಳುವಂತ ಸರಳ ಮಾರ್ಗವನ್ನು ಪರಿಚಿಯಿಸಿಕೊಟ್ಟಿದೆ.
ಗೂಗಲ್ಗೆ ಸರಿಯಾದ ಟಕ್ಕರ್ಏನಿದು ChatGPT ಸರ್ಚ್?
ಗೂಗಲ್ಗೆ ಸರಿಯಾದ ಟಕ್ಕರ್
ಈ ಹಿಂದೆಲ್ಲ ಮಾಹಿತಿ ಕಲೆಹಾಕಬೇಕೆಂದರೆ ಗೂಗಲ್ ಸರ್ಚ್ ಇಂಜಿನ್ಗೆ ಹೋಗಬೇಕಿತ್ತು. ಆದರೆ, ಎಐ ತಂತ್ರಜ್ಞಾನದಡಿ ಓಪನ್ಎಐ ಇದೀಗ ಗೂಗಲ್ಗೆ ಪ್ರತಿಸ್ಪರ್ಧಿಯಾಗಿ ಚಾಟ್ಜಿಪಿಟಿ ಸರ್ಚ್ ಅನ್ನು ಬಳಕೆದಾರರ ಬೆರಳಂಚಿಗೆ ತಲುಪಿಸಿದೆ. ಚಾಟ್ಜಿಪಿಟಿ ಯಾವ ಪ್ರಶ್ನೆಗೆ ಹೇಗೆ ಮತ್ತು ಎಷ್ಟು ವೇಗವಾಗಿ ಉತ್ತರವನ್ನು ಕೊಡಬಹುದು ಎಂಬುದನ್ನು ಅದ್ಭುತವಾಗಿ ಅರಿತಿದೆ. ರಿಯಲ್ ಟೈಮ್ ಉತ್ತರಗಳನ್ನು ಕೊಡುವ ಮುಖೇನ ಬಳಕೆದಾರರ ನೆಚ್ಚಿನ ಮಾಹಿತಿ ತಂತ್ರಜ್ಞಾನ ಎಂಬ ಕೀರ್ತಿಯನ್ನು ಗಳಿಸಿರುವ ಈ ಚಾಟ್ಜಿಪಿಟಿ ಇದೀಗ ಮತ್ತಷ್ಟು ಆಧುನಿಕವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.
ಏನಿದು ChatGPT ಸರ್ಚ್?
ಓಪನ್ ಎಐ ಸಂಸ್ಥೆಯ ಪವರ್ಫುಲ್ ಮತ್ತು GPT-4 ಮಾದರಿಯ ವರ್ಧಿತ ಆವೃತ್ತಿಯಿಂದ ತಯಾರಿಸ್ಪಟ್ಟ ಚಾಟ್ಜಿಪಿಟಿ ಸರ್ಚ್ ಇದಾಗಿದೆ. ಇದು ರಿಯಲ್ ಟೈಮ್ ಮಾಹಿತಿ ಮತ್ತು ಸೂಕ್ತ ವೆಬ್ನಿಂದ ಫೋಟೋಗಳನ್ನು ಆಯ್ದು ಬಳಕೆದಾರರ ಮುಂದಿಡುತ್ತದೆ. ಇದರ ಬಳಕೆಯಲ್ಲಿ ತೊಡಗಿರುವ ಮಂದಿ, ಕ್ರೀಡೆ, ದೇಶ, ಪ್ರತ್ಯೇಕ ವಿಷಯ ಹೀಗೆ ನಾನಾ ವಿಷಯಗಳನ್ನು ಕೇಳಿ, ಕ್ಷಣಮಾತ್ರದಲ್ಲಿ ತಕ್ಕ ಉತ್ತರವನ್ನು ಸ್ವೀಕರಿಸಬಹುದಾಗಿದೆ.
ಚಾಟ್ಜಿಪಿಟಿ ಸರ್ಚ್ ಎಲ್ಲರಿಗೂ ಅನ್ವಯವೇ?
ಸದ್ಯದ ಮಟ್ಟಿಗೆ ಚಾಟ್ಜಿಪಿಟಿ ಸರ್ಚ್ ಕೇವಲ ತನ್ನ ಚಂದಾದಾರಿಕೆ ಪಡೆದಿರುವವರಿಗೆ ಮಾತ್ರ ಉಚಿತವಾಗಿ ನೀಡುತ್ತಿದೆಯೇ ಹೊರತು ಉಳಿದ ಬಳಕೆದಾರರಿಗೆ ಕೊಟ್ಟಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದ್ದೇ ಆದರೂ ಸಂಸ್ಥೆ ನೀಡಿರುವ ಮತ್ತೊಂದು ಮಾಹಿತಿಯಿಂದ ಖುಷಿ ನೀಡಿದೆ. ತಾತ್ಕಾಲಿಕವಾಗಿ ಚಂದಾದಾರಿಗೆ ಮಾತ್ರ ಮುಕ್ತ ಉಪಯೋಗಕ್ಕೆ ಅನುಮತಿ ನೀಡಿರುವ ಓಪನ್ ಎಐ, ಶೀಘ್ರವೇ ಎಲ್ಲಾ ಬಳಕೆದಾರರ ಬೆರಳಂಚಿಗೆ ತಲುಪಿಸಲಿದ್ದೇವೆ ಎಂದು ತಿಳಿಸಿದೆ.