HEALTH TIPS

ಮನೆಯೊಳಗೆ ಕಾಲಿಟ್ಟ ತಕ್ಷಣ Phone Network ಮಾಯವಾಗುತ್ತಾ? ಹಾಗಾದ್ರೆ ಪರಿಹಾರಕ್ಕಾಗಿ ಈ ಹಂತಗಳನ್ನು ಅನುಸರಿಸಿ!

 ಇಂದಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಹೆಚ್ಚು ತಲೆಕೆಡಿಸುವ ವಿಷಯವೆಂದರೆ ನೆಟ್ವರ್ಕ್ ಸಮಸ್ಯೆಯಾಗಿದೆ. ಯಾಕೆಂದರೆ ರಿಚಾರ್ಜ್ ಹೊಂದಿದ್ದು, ಬ್ಯಾಟರಿ ಪೂರ್ತಿಯಾಗಿದ್ದು ಕೇವಲ ನೆಟ್ವರ್ಕ್ ಮಾತ್ರ ಇಲ್ಲವಾದ್ರೆ ಎಲ್ಲವೂ ವ್ಯರ್ಥ ಅಂದ್ರೆ ತಪ್ಪಿಲ್ಲ. ಯಾಕೆಂದರೆ ಅನೇಕ ಬಾರಿ ನಾವು ಹೊರಗಿನಿಂದ ಮನೆಯೊಳಗೆ ಕಾಲಿಟ್ಟ ತಕ್ಷಣ ಫೋನ್ ನೆಟ್ವರ್ಕ್ (Phone Network) ಮಾಯವಾಗುವುದು ಅನೇಕ ಜನರ ಅನುಭವಿಸುತ್ತಿರುವ ಸಮಸ್ಯೆಯಾಗಿದೆ.

ಆದ್ದರಿಂದ ಅದನ್ನು ಪರಿಹರಿಸಲು ನಾನು ನಿಮಗೆ ಈ ಕೆಳಗೆ ಉಪಯುಕ್ತವಾದ ಅಂಶಗಳನ್ನು ವಿವರಿಸಿದ್ದೇನೆ. ನೆಟ್ವರ್ಕ್ ಇಲ್ಲದೆ ಕರೆ, ಮೆಸೇಜ್ ಅಥವಾ ಇಂಟರ್ನೆಟ್ ಬಳಸಲು ತುಂಬ ಸಾಧ್ಯವಿರೋಲ್ಲ ಈ ಸಮಸ್ಯೆಯು ಹಲವಾರು ಕಾರಣಗಳಿಂದ ಸಂಭವಿಸುತ್ತಿರಬಹುದು. ಅಲ್ಲದೆ ಇಂಹತ ಸಮಸ್ಯೆಗಳಿಗೆ ಸಣ್ಣಪುಟ್ಟ ಸೆಟ್ಟಿಂಗ್ ಮಾಡಲು ನಿಮಗೆ ಇಂಟರ್ನೆಟ್‌ನಲ್ಲಿ ಅನೇಕ ಸಲಹೆ ಅಥವಾ ವಿಡಿಯೋ ಲಭ್ಯವಿರುತ್ತದೆ. ಆದರೆ ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸಲು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕಾಗುತ್ತದೆ.

Also Read: 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Nothing Phone (2a) 5G ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರಿ ಕುಸಿತ!

ನಿಮ್ಮ Phone Network ಸಮಸ್ಯೆಗೆ ಕಾರಣವನ್ನು ಪತ್ತೆ ಹಚ್ಚಿ:

ಮೊದಲು ನೀವು ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸಿಗ್ನಲ್‌ಗೆ ಅಡ್ಡಿಯಾಗುವ ವಸ್ತುಗಳನ್ನು ಗುರುತಿಸುವುದು ಮುಖ್ಯವಾಗಿದೆ. ಇದಕ್ಕೆ ಉದಾಹರಣೆಗೆ ಲೋಹದ ಬಾಗಿಲುಗಳು, ಲೋಹದ ಫ್ರಮ್‌ಗಳನ್ನು ಹೊಂದಿರುವ ಗೋಡೆಗಳು, ಕಟ್ಟಡಗಳು ಮತ್ತು ಗಾಜಿನ ಲೇಪನದೊಂದಿಗೆ ನಿಂತಿರುವ ಕಟ್ಟಡಗಳು ನೆಟ್ವರ್ಕ್ ಸಿಗ್ನಲ್‌ ದುರ್ಬಲಕ್ಕೆ ಪ್ರಮುಖ ಕಾರಣವಾಗಿರುತ್ತದೆ.

ನಿಮ್ಮ ಕಾರ್ಯಸ್ಥಳ ಭೂಮಿಯ ಕೆಳಗಿನ ಅಂದ್ರೆ ನಿಮ್ಮ ಮನೆಯ ಮುಂದಿರುವ ರಸ್ತೆಗಿಂತ ಕೆಳಗಿದ್ದರೆ ಅಥವಾ ಹೆಚ್ಚು ಗಾಳಿ ಪ್ರವೇಶಿಸದ ಸ್ಥಳದಲ್ಲಿದ್ದರೆ ಇಂತಹ ಸ್ಥಳಗಳಲ್ಲಿ ಸಹಜವಾಗಿಯೇ ನೆಟ್ವರ್ಕ್ ಸಿಗ್ನಲ್‌ ಕಡಿಮೆ ಇರುತ್ತದೆ. ಇದಕ್ಕೆ ಒಂದೇ ಪರಿಹಾರವೆಂದರೆ ಇಂತಹ ಸ್ಥಳಗಳಲ್ಲಿ ನೆಟ್ವರ್ಕ್ ಬೂಸ್ಟರ್ ಅಳವಡಿಸುವುದು ಮುಖ್ಯವಾಗಿರುತ್ತದೆ.

ನಿಮ್ಮ ಫೋನ್‌ ಕವರ್ ಕೇಸ್‌ ಪರಿಶೀಲಿಸಿಕೊಳ್ಳಿ:

ನಿಮ್ಮ ಮೊಬೈಲ್ ಫೋನ್ನೊಂದಿಗೆ ಬಳಸುತ್ತಿರುವ ನಿಮ್ಮ ಫೋನ್‌ ಕವರ್ ಕೇಸ್‌ ಪರಿಶೀಲಿಸಿಕೊಳ್ಳುವುದು ಉತ್ತಮ ಯಾಕೆಂದರೆ ಅದು ದಪ್ಪವಾಗಿದ್ದರೆ ಅಥವಾ ಯಾವುದೇ ಲೋಹದ ಪದಾರ್ಥಗಳಿಂದ ತಯಾರಿಸಲಾಗಿದ್ದರೆ ಅಂತಹ ಫೋನ್‌ ಕೇಸ್‌ಗಳು ಸಹ ಸಿಗ್ನಲ್‌ಗೆ ಅಡ್ಡಿಯಾಗಬಹುದು. ಉತ್ತಮ ಸಿಗ್ನಲ್‌ ಪಡೆಯಲು ಒಂದು ಸಲ ಫೋನ್‌ ಕೇಸ್‌ ತೆಗೆದುಹಾಕಿ ಸಿಗ್ನಲ್‌ ಹೆಚ್ಚಾಗಿದೆಯೇ ಎಂದು ಪರೀಕ್ಷಿಸಬಹುದು. ಸಾಧ್ಯವಾದಷ್ಟು ಸಣ್ಣ ಮತ್ತು ತೆಳ್ಳಗಿನ ಒಳ್ಳೆ ಮಾದರಿಯ ಕವರ್ ಕೇಸ್ ಬಳಸುವ ಸಲಹೆಯನ್ನು ನೀಡಲಾಗುತ್ತದೆ.

ಮನೆಯಲ್ಲಿ ಯಾವ ಸ್ಥಳದಲ್ಲಿ ಹೆಚ್ಚು ಸಿಗ್ನಲ್‌ ಬರುತ್ತದೆ ಗುರುತಿಸಿ:

ಇದು ನಿಮ್ಮ ಬಳಕೆಯನ್ನು ಹೆಚ್ಚಿಸಲು ಸಹಾಯವಾಗಲಿದೆ ಮನೆಯ ಒಳಗೆ ನಿಮಗೆ ಸಿಗ್ನಲ್‌ ಸಮಸ್ಯೆ ಇದ್ದರೆ ನಿಮಗೆ ಹೆಚ್ಚು ಮುಖ್ಯವಾದ ಅಂಶವಾಗಿದೆ. ಯಾಕೆಂದರೆ ಒಮ್ಮೆ ನಿಮಗೆ ಯಾವ ಸ್ಥಳದಲ್ಲಿ ನೆಟ್ವರ್ಕ್ ಲಭ್ಯವಿದೆಯೋ ಆ ಸ್ಥಳವನ್ನು ಗುರುತಿಸಿ ಬಳಕೆ ಮಾಡಬಹುದು. ಮನೆಯ ವಿವಿಧ ಭಾಗಗಳಲ್ಲಿ ನೆಟ್ವರ್ಕ್ ಸಿಗ್ನಲ್‌ ಪವರ್ ಅನ್ನು ಮಾಪನ ಮಾಡಿಕೊಳ್ಳುವುದು ಉತ್ತಮ. ಹೆಚ್ಚಾಗಿ ಇದನ್ನು ನೀವು ಬಾಲ್ಕನಿ, ಕಿಟಿಕಿ ಅಥವಾ ಮನೆಯ ನಿರ್ದಿಷ್ಟ ಕೋಣೆಯಲ್ಲಿ ಸಿಗ್ನಲ್‌ ಬಲವಾಗಿದೆ ಎಂದು ಗುರುತಿಸಿದರೆ ನೀವು ಸಾಧ್ಯವಾಗುವಷ್ಟು ಮಟ್ಟಿಗೆ ಅಲ್ಲಿಯೇ ಫೋನ್‌ ಬಳಸುವುದು ಉತ್ತಮ.

ನೆಟ್ವರ್ಕ್ ಸಿಗ್ನಲ್ ಬೂಸ್ಟರ್ ಬಳಸಿ:

ಕೊನೆಯ ಆಯ್ಕೆಯೆಂದರೆ ನೆಟ್ವರ್ಕ್ ಸಿಗ್ನಲ್ ಬೂಸ್ಟರ್‌ಗಳು (Network Singnal Booster) ಬಳಸುವುದು. ಇವು ಸಿಗ್ನಲ್‌ ಹೆಚ್ಚಿಸುವ ಸಾಧನಗಳಾಗಿದ್ದು ನಿಮ್ಮ ಮನೆಯ ಅಥವಾ ಹತ್ತಿರದ ಉದ್ದವಿರುವ ಯಾವುದಾದರೊಂದು ಕಂಬಕ್ಕೆ ಕಟ್ಟಿ ಉತ್ತಮ ನೆಟ್ವರ್ಕ್ ಸಿಗ್ನಲ್ ಪಡೆಯಬಹುದು.

ಆದರೆ ಈ ನೆಟ್ವರ್ಕ್ ಬೂಸ್ಟರ್ ಉಚಿತವಲ್ಲ ಇದಕ್ಕಾಗಿ ಪ್ರತ್ಯೇಕ ಹಣ ನೀಡಿ ಖರೀದಿಸಬೇಕುತ್ತದೆ. ಇದನ್ನು ಒಬ್ಬ ವ್ಯಯಕ್ತಿಕ ವ್ಯಕ್ತಿ ಅಥವಾ ಪೂರ್ತಿ ಕುಟುಂಬ ಸೇರಿ ಟೆಲಿಕಾಂ ಕಂಪನಿಯಿಂದ ಪಡೆಯಬಹುದು. ನೀವು ಇದನ್ನು ಎಲ್ಲಿಂದಾದರೂ ಪಡೆಯಿರಿ ಇದಕ್ಕೆ ನಿಮ್ಮ ನೆಟ್‌ವರ್ಕ್ ಆಪರೇಟರ್‌ ಅನುಮತಿ ಪಡೆಯುವುದು ಅತ್ಯಗತ್ಯವಾಗಿದೆ. ನಂತರ ಉತ್ತಮ ಕರೆ ಕ್ವಾಲಿಟಿಯೊಂದಿಗೆ ಫಾಸ್ಟ್ ಇಂಟರ್ನೆಟ್ ಸ್ಪೀಡ್ ಬಳಸಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries