ಚೆನ್ನೈ: 'ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆಸಿಡಿಟಿ ಸಮಸ್ಯೆಯಿಂದ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ' ಎಂದು ಚೆನ್ನೈನ ಅಪೋಲೊ ಆಸ್ಪತ್ರೆ ಮಾಹಿತಿ ನೀಡಿದೆ.'ದಾಸ್ ಅವರ ಆರೋಗ್ಯದ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ.
ಆದಷ್ಟು ಬೇಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು' ಎಂದು ಅಪೋಲೊ ಆಸ್ಪತ್ರೆಯ ಡಾ. ಆರ್.ಕೆ. ವೆಂಕಟಾಸಲಮ್ ಅವರು ಬಿಡುಗಡೆ ಮಾಡಿರುವ ಮೆಡಿಕಲ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಕಾರ್ಯನಿಮಿತ್ತ ಚೆನ್ನೈಗೆ ತೆರಳಿದ್ದ ವೇಳೆ ಶಕ್ತಿಕಾಂತ್ ದಾಸ್ ಅವರಿಗೆ ಎದೆಯುರಿ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.