HEALTH TIPS

ಸರ್ಕಾರಿ ನೇಮಕಾತಿ: ಅಧಿಸೂಚನೆಯಲ್ಲಿ ತಿಳಿಸದೇ ನಡುವೆ ನಿಯಮ ಬದಲಿಸುವಂತಿಲ್ಲ ಎಂದ SC

 ವದೆಹಲಿ: ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

'ಒಂದು ಬಾರಿ ನೇಮಕಾತಿ ಪ್ರಕ್ರಿಯೆ ಆರಂಭವಾದರೆ, ಅದನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ. ಇದು 'ಆಟದ ನಿಯಮ'. ನೇಮಕಾತಿಯ ನಿಯಮಗಳು ಅನಿಯಂತ್ರಿತವಾಗಿರಬಾರದು ಹಾಗೂ ಸಂವಿಧಾನದ 14ನೇ ವಿಧಿಗೆ ಅನುಗುಣವಾಗಿರಬೇಕು ಎಂದು ಪೀಠ ಹೇಳಿದೆ.

ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿತ್ತಲ್‌ ಹಾಗೂ ಮನೋಜ್ ಮಿಶ್ರಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೇಮಕಾತಿಗಳು ಎಂದೆಂದಿಗೂ ತಾರತಮ್ಯ ರಹಿತ ಹಾಗೂ ಪಾರದರ್ಶಕವಾದ ಪಕ್ಷಗಳನ್ನು ಹೊಂದಿರಬೇಕು. ಆದರೆ ಮಧ್ಯದಲ್ಲಿ ಏನೇ ಬದಲಾವಣೆಗಳಾದರೂ ಅದರಿಂದ ಅಭ್ಯರ್ಥಿಗಳೂ ಅಚ್ಚರಿಗೊಳಗಬಾರದು ಎಂದು ಪೀಠ ಅಭಿಪ್ರಾಯಪಟ್ಟಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries