HEALTH TIPS

ನಿಮ್ಮ SIM Card ರೀಚಾರ್ಜ್ ಮಾಡದೆ ಇದ್ದಾಗ ಎಷ್ಟು ದಿನಗಳವರೆಗೆ ಬಳಕೆಯಲ್ಲಿರುತ್ತದೆ?

 SIM Card: ವೇಗವಾಗಿ ಬೆಳೆಯುತ್ತಿರುವ ಇಂದಿನ ಜನ ಜೀವನದಲ್ಲಿ ಅನೇಕ ನಮ್ಮ ಅಗತ್ಯದ ಸಣ್ಣಪುಟ್ಟ ಕೆಲಸಗಳು ನಮ್ಮ ನೆನಪಿನಿಂದ ಮರೆಯಾಗಿ ಸಮಸ್ಯೆಗಳಿಗೆ ದಾರಿ ಮಾಡುತ್ತಿವೆ. ಅಂತಹ ಒಂದು ಸನ್ನಿವೇಶಗಳಲ್ಲಿ ನಮ್ಮ ಅಥವಾ ನಮ್ಮ ಪ್ರೀತಿಪಾತ್ರರ ಮೊಬೈಲ್ ರಿಚಾರ್ಜ್ ಮಾಡುವುದು ಒಂದಾಗಿದೆ. ಆದ್ದರಿಂದ ಯಾವುದೋ ಅನಿವಾರ್ಯದ ಕಾರಣಗಳಿಂದಾಗಿ ನಿಮ್ಮ ಮೊಬೈಲ್ ರೀಚಾರ್ಜ್ ಮಾಡದೆ ಇದ್ದಾಗ SIM Card ಗತಿ ಏನಾಗುತ್ತೆ? ಇದಕ್ಕೆ ಟೆಲಿಕಾಂ ಕಂಪನಿಗಳ ನಿಯಮಗಳೇನು ಹೇಳುತ್ತವೆ ಎಂಬುದರ ಮಾಹಿತಿ ಇಲ್ಲಿವೆ.

ಇಂದಿನ ಹೊಸ ನಿಯಮ ಮತ್ತು ಬೆಲೆ ಏರಿಕೆ!

ಮೊದಲು ಅಂದ್ರೆ ಸುಮಾರು 5-6 ವರ್ಷಗಳ ಹಿಂದೆ ಈ ಮೇಲಿನ ಪ್ರಶ್ನೆ ಯಾರಿಗೂ ಬರುತ್ತಿರಲಿಲ್ಲ ಯಾಕೆಂದರೆ ಅಂದು ಈ ರೀತಿಯ ಯಾವುದೇ ಅಗತ್ಯವಿರಲಿಲ್ಲ. ಯಾಕೆಂದರೆ ಸಿಮ್ ಕಾರ್ಡ್ ವ್ಯಾಲಿಡಿಟಿ (SIM Card Validity) ಲೈಫ್ ಟೈಮ್ ಜೊತೆಗೆ ಬರುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿ, ಪ್ರತಿಸ್ಪರ್ಧೆ ಮತ್ತು ವಸ್ತುಗಳ ಬೆಲೆ ಏರಿಕೆಯ ಹಿನ್ನಲೆಯಲ್ಲಿ ಕೇವಲ 100 ರೂಗಳಿಗೆ ಪ್ರತಿದಿನದ ಡೇಟಾ, ಕರೆ ಮತ್ತು SMS ನೀಡುತ್ತಿದ್ದ ಟೆಲಿಕಾಂ ಕಂಪನಿಗಳು ಇಂದು ಬರೋಬ್ಬರಿ 299 ರೂಗಳಿಗೆ ಈ ಸೇವೆಗಳನ್ನು ನೀಡುತ್ತಿವೆ ಅಂದ್ರೆ ದ್ವಿಗುಣ ಬೆಲೆ ಏರಿಕೆಯಾಗಿದೆ.

SIM Card ರೀಚಾರ್ಜ್ ಮಾಡದೆ ಇದ್ದಾಗ ಏನಾಗುತ್ತದೆ?

ಇದರ ಬಗ್ಗೆ ಸಿಮ್ ಕಾರ್ಡ್ ಖರೀದಿಸುವಾಗ ಬರುವ ಯೂಸರ್ ಮಾನ್ಯುಯಲ್ ಅಲ್ಲೂ ಸಹ ತಿಳಿಸಲಾಗಿರುತ್ತದೆ. ಇದಕ್ಕೆ ಟೆಲಿಕಾಂ ಕಂಪನಿಗಳ ನಿಯಮಗಳೇನು ಹೇಳುತ್ತವೆ ಎಂಬುದರ ಮಾಹಿತಿ ಇಲ್ಲಿವೆ. TRAI ಗ್ರಾಹಕ ಕೈಪಿಡಿಯ ಪ್ರಕಾರ 90 ದಿನಗಳವರೆಗೆ (ಸುಮಾರು 3 ತಿಂಗಳು) ರಿಚಾರ್ಜ್ ಮಾಡದಿದ್ದರೆ ಸಿಮ್ ಕಾರ್ಡ್ (SIM Card) ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ಸರಳ ಭಾಷೆಯಲ್ಲಿ ಮಾತಾನಾಡುವದಾದರೆ ಒಂದು ವೇಳೆ ನಿಮ್ಮ ಸಿಮ್ ಕಾರ್ಡ್ ಅನ್ನು ನೀವು 90 ರೀಚಾರ್ಜ್ ಇಲ್ಲದೆ ಸಿಮ್ ಇದ್ದರೆ ಕಂಪನಿ ಬ್ಲಾಕ್ ಮಾಡಿ ಕೆಲವು ಹಂತಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬೇರೆಯವರಿಗೆ ನೀಡುವ ಹಕ್ಕನ್ನು ಹೊಂದಿರುತ್ತದೆ. ಅಲ್ಲದೆ ಈಗ ಎಲ್ಲರೂ ಡ್ಯುಯಲ್ ಸಿಮ್ ಫೋನ್ ಉಪಯೋಗಿಸುತ್ತಿರುವುದು ಅನಿವಾರ್ಯವಾಗಿದೆ. ಇದರಲ್ಲಿ ಒಂದು ಒಂದು ನಂಬರ್ ತಮ್ಮ ಪರ್ಸನಲ್‌ ಬಳಕೆಗಾಗಿ ಬಳಸಿದರೆ ಮತ್ತೊಂದು ಆಫೀಸ್‌ ಅಥವಾ ಆನ್ಲೈನ್ ಬಳಕೆಗಾಗಿ ಬಳಸಲಾಗುತ್ತಿದೆ.

ಈ 90 ದಿನಗಳೊಳಗೆ ನೀವು ರೀಚಾರ್ಜ್ ಮಾಡಿಕೊಂಡರೆ ಸಿಮ್ ಆಕ್ಟಿವೇಟ್ ಮಾಡಬಹುದು. ಯಾವುದೇ ರಿಚಾರ್ಜ್ ಇಲ್ಲದಿದ್ದರೆ ಸಮಯಕ್ಕೆ ಅನುಗುಣವಾಗಿ ಕಂಪನಿ ಮೆಸೇಜ್ ಮತ್ತು ಕರೆಗಳ ಮೂಲಕ ನೋಟಿಫಿಕೇಶನ್ ನೀಡುತ್ತಿರುತ್ತವೆ. ಈ ಎಚ್ಚರಿಕೆ ಕಡೆಗಣಿಸಿದರೆ ಕಂಪನಿ ನಿಮ್ಮ ಸಿಮ್ ಕಾರ್ಡ್ ಅನ್ನು 90 ದಿನಗಳ ನಂತರ ಬ್ಲಾಕ್ ಮಾಡುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries