HEALTH TIPS

US Election: ಇತಿಹಾಸ; ವರ್ಜೀನಿಯಾದಿಂದ ಭಾರತ ಮೂಲದ ಸುಹಾಸ್ ಸುಬ್ರಹ್ಮಣ್ಯಂ ಆಯ್ಕೆ

 ವಾಷಿಂಗ್ಟನ್: ಭಾರತ ಮೂಲದ ಸುಹಾಸ್ ಸುಬ್ರಹ್ಮಣ್ಯಂ ಅವರು ಅಮೆರಿಕದ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟಿಕ್ಟ್ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ.

ಇಡೀ ಪೂರ್ವ ಕರಾವಳಿಯಿಂದ ಚುನಾಯಿತರಾದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಡೆಮಾಕ್ರಟಿಕ್ ಭದ್ರಕೋಟೆಯಾದ ವರ್ಜೀನಿಯಾದಿಂದ ಜನಪ್ರತಿನಿಧಿಗಳ ಸಭೆಗೆ(ಕಾಂಗ್ರೆಸ್) ಸ್ಪರ್ಧಿಸಿದ್ದ ಸುಬ್ರಮಣ್ಯಂ ಅವರು ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸಿದ್ದಾರೆ.

'ಕಾಂಗ್ರೆಸ್‌ನಲ್ಲಿ ಕಠಿಣ ಹೋರಾಟಗಳನ್ನು ನಡೆಸಲು ಮತ್ತು ಜನರ ಪರವಾಗಿ ಫಲಿತಾಂಶಗಳನ್ನು ನೀಡಲು ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟಿಕ್ಟ್ ಜನರಿಗೆ ಆಭಾರಿಯಾಗಿದ್ದೇನೆ. ಈ ಕ್ಷೇತ್ರ ನನ್ನ ಮನೆ. ನಾನು ಇಲ್ಲಿಯೇ ಮದುವೆಯಾಗಿದ್ದೇನೆ. ನನ್ನ ಹೆಂಡತಿ ಮಿರಾಂಡಾ ಮತ್ತು ನಾನು ಇಲ್ಲಿಯೇ ನಮ್ಮ ಹೆಣ್ಣುಮಕ್ಕಳನ್ನು ಬೆಳೆಸುತ್ತಿದ್ದೇವೆ. ಇಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಕುಟುಂಬಕ್ಕೆ ವೈಯಕ್ತಿಕವಾದವುಗಳು. ಈ ಜಿಲ್ಲೆಗೆ ಸೇವೆ ಸಲ್ಲಿಸಲು ನನಗೆ ಸಿಕ್ಕ ಸದಾವಕಾಶ ಇದಾಗಿದೆ'ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಪ್ರಸ್ತುತ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀ ಥಾನೇದಾರ್ ಸೇರಿ ಐವರು ಭಾರತೀಯ ಅಮೆರಿಕನ್ನರನ್ನು ಒಳಗೊಂಡಿರುವ ಕಾಂಗ್ರೆಸ್‌ನ ಸಮೋಸಾ ಕಾಕಸ್‌ಗೆ ಸುಬ್ರಹ್ಮಣ್ಯಂ ಸೇರ್ಪಡೆಯಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries