HEALTH TIPS

ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

Top Post Ad

Click to join Samarasasudhi Official Whatsapp Group

Qries

:      ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಒಬ್ಬ ಲೈಂಗಿಕತೃಷೆ ತೀರಿಸಿಕೊಳ್ಳಲು ತನ್ನ ಗೆಳತಿಯನ್ನು ಯುಎಸ್ ಮಾಜಿ ಅಧ್ಯಕ್ಷರ ಮನೆಗೇ ಕರೆಸಿದ್ದ ಅಪರೂಪದ ಪ್ರಸಂಗ ವರದಿಯಾಗಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹವಾಯಿ ದ್ವೀಪದ ಖಾಸಗಿ ಎಸ್ಟೇಟ್‌ನಲ್ಲಿ 2022 ನವೆಂಬರ್ 6 ರಂದು ಈ ಘಟನೆ ನಡೆದಿದೆ ಎಂದು ಎಬಿಸಿ ಚಾನಲ್ ವರದಿ ಮಾಡಿದೆ.

           ಕೊರಿಯೇ ಡ್ವಾನ್ಯೆನ್ ಎನ್ನುವ ಯುವತಿ ಡಾಲೆ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಕೊರಿಯೇ ತಮಗಾದ ಅನುಭವನ್ನು ತೆರೆದಿಟ್ಟಿದ್ದಾರೆ.

         ಪುಸ್ತಕದ ಸಂಗತಿ ಹಲವರ ಗಮನ ಸೆಳೆದ ಮೇಲೆ, ಎಬಿಸಿ ಚಾನಲ್ ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಪ್ರತಿಕ್ರಿಯೆ ಕೇಳಿತ್ತು. ಇದನ್ನು ಖಚಿತಪಡಿಸಿರುವ ಮುಖ್ಯಸ್ಥರು, ,ಹೌದು ಆ ಘಟನೆ ನಡೆದಿತ್ತು. ಅದಕ್ಕಾಗಿ ಆರೋಪಿತ ಏಜೆಂಟ್‌ನನ್ನು ತಕ್ಷಣವೇ ಅಮಾನತು ಮಾಡಲಾಗಿತ್ತು. ಆಂತರಿಕ ವರದಿ ಬಂದ ನಂತರ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು' ಎಂದು ಹೇಳಿದ್ದಾರೆ. ಆತನ ಗುರುತನ್ನು ಬಹಿರಂಗಪಡಿಸಿಲ್ಲ.

               ಅಂದು ಯಾರಿಗೂ ತಿಳಿಯುವುದಿಲ್ಲ ಬಾ ಎಂದು ಮಾಜಿ ಅಧ್ಯಕ್ಷರ (ಒಬಾಮ) ಹವಾಯಿ ಬೀಚ್ ಪಕ್ಕದಲ್ಲಿರುವ ಅತ್ಯಂತ ಐಷಾರಾಮಿ ಬಂಗ್ಲೆಗೆ ಲೈಂಗಿಕತೃಷೆ ತೀರಿಸಿಕೊಳ್ಳಲು ನನ್ನನ್ನು ಆಹ್ವಾನಿಸಿದ್ದ. ವಿಲಾಸಿ ಬಾತ್‌ರೂಂನಲ್ಲಿ ಸೆಕ್ಸ್ ಮಾಡಿದ್ದೆವು. ಆ ಸಮಯದಲ್ಲಿ ಒಬಾಮಾ-ಮಿಚೆಲ್ ಇರಲಿಲ್ಲ ಎಂದು ಕೊರಿಯೇ ಬಹಿರಂಗಪಡಿಸಿದ್ದಾರೆ.

       ಈ ಇಬ್ಬರೂ ಇನ್ನೂ ಜೊತೆಯಾಗಿಯೇ ವಾಸಿಸುತ್ತಿದ್ದಾರೆ ಎಂದು ಸೀಕ್ರೆಟ್ ಸರ್ವಿಸ್ ಏಜೆಂಟ್ ಮುಖ್ಯಸ್ಥರು ಹೇಳಿದ್ದಾರೆ.

        ಆರೋಪಿತ ಏಜೆಂಟ್ ಒಬಾಮ ಅವರ ಇಬ್ಬರು ಹೆಣ್ಣು ಮಕ್ಕಳಾದ ಸಾಶಾ (23) ಮತ್ತು ಮಿಲಿಯಾ (26) ಅವರ ಭದ್ರತೆಯ ಹೊಣೆ ಹೊತ್ತಿದ್ದ ತಂಡದ ಸದಸ್ಯ ಎನ್ನಲಾಗಿದೆ.

            ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್‌ ಎಂಬುದು ಅಧ್ಯಕ್ಷರಿಗೆ, ಮಾಜಿ ಅಧ್ಯಕ್ಷರಿಗೆ, ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುತ್ತದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries