ವಯನಾಡ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನವೆಂಬರ್ 3ರಿಂದ ವಯನಾಡ್ ಲೋಕಸಭಾ ಉಪಚುನಾವಣೆಗೆ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ.
ವಯನಾಡ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನವೆಂಬರ್ 3ರಿಂದ ವಯನಾಡ್ ಲೋಕಸಭಾ ಉಪಚುನಾವಣೆಗೆ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ.
ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಜಂಟಿ ಸಾರ್ವಜನಿಕ ಸಭೆ ಮತ್ತು ಬೀದಿ ಬದಿ ಸಭೆಗಳನ್ನು ನಡೆಸಲಿರುವ ಪ್ರಿಯಾಂಕಾ ಗಾಂಧಿ, ನವೆಂಬರ್ 7ರವರೆಗೆ ಕೇರಳದಲ್ಲಿ ಇರುತ್ತಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಅವರ ಪ್ರವಾಸದ ಪಟ್ಟಿ ತಿಳಿಸಿದೆ.
ಪ್ರಿಯಾಂಕಾ ಅವರು ರಾಹುಲ್ ಅವರೊಂದಿಗೆ ನವೆಂಬರ್ 3, 11ರಂದು ಮನಂತವಾಡಿಯ ಗಾಂಧಿ ಪಾರ್ಕ್‌ನಲ್ಲಿ ಜಂಟಿ ಸಾರ್ವಜನಿಕ ಸಭೆ ನಡೆಸಲಿದ್ದು, ನಂತರ ಅದೇ ದಿನ ಇತರ ಮೂರು ಸ್ಥಳಗಳಲ್ಲಿ ಪ್ರತ್ಯೇಕ ಬೀದಿ ಬದಿ ಸಭೆಗಳನ್ನು ಮಾಡಲಿದ್ದಾರೆ.
ಜಂಟಿ ಸಾರ್ವಜನಿಕ ಸಭೆಯೊಂದಿಗೆ, ರಾಹುಲ್ ಇಲ್ಲಿಯ ಅರಿಕೋಡ್‌ನಲ್ಲಿ ಪ್ರತ್ಯೇಕವಾಗಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಪ್ರಚಾರದ ವಿವರದಲ್ಲಿ ತಿಳಿಸಿದೆ.
ನವೆಂಬರ್ 4 ರಂದು ಕಲ್ಪೆಟ್ಟಾ ಮತ್ತು ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರಗಳ ಐದು ಸ್ಥಳಗಳಲ್ಲಿ ಪ್ರಿಯಾಂಕಾ ಬೀದಿ ಬದಿ ಸಭೆ ನಡೆಸಲಿದ್ದು, 5, 6 ಮತ್ತು 7ರ ಪ್ರಚಾರದ ವಿವರವನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಪಕ್ಷವು ತಿಳಿಸಿದೆ.