ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ದೇಶದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. 10 ರೂಪಾಯಿ ರೀಚಾರ್ಜ್‌ನಿಂದ 365 ದಿನ ವ್ಯಾಲಿಡಿಟಿಯ ಪ್ಲಾನ್‌ಗಳ ಕುರಿತು TRAI ಹೊಸ ನಿಯಮಗಳನ್ನು ಪ್ರಕಟಿಸಿದೆ. ಡ್ಯುಯಲ್ ಸಿಮ್ ಬಳಕೆದಾರರು ವಾಯ್ಸ್ ಓನ್ಲಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.
Telecom Regulatory Authority of India ಪ್ರಮುಖ ಹೊಸ ನಿಯಮಗಳು
1.TRAI ಗ್ರಾಹಕ ಸಂರಕ್ಷಣಾ ನಿಯಂತ್ರಣವನ್ನು ತಿದ್ದುಪಡಿ ಪ್ರಕಾರ, 2G ಫೀಚರ್ ಫೋನ್ ಬಳಕೆದಾರರಿಗೆ ವಾಯ್ಸ್ ಮತ್ತು ಎಸ್‌ಎಂಎಸ್ ಹೊಂದಿರುವ ಪ್ರತ್ಯೇಕ ವಿಶೇಷ ಟ್ಯಾರಿಫ್ ವೋಚರ್ (STV) (ಪ್ರಿಪೇಯ್ಡ್ ಪ್ಲಾನ್) ಪ್ರಕಟಿಸುವುದು. ಈ ನಿಯಮದಿಂದ 2G ಫೀಚರ್ ಅಥವಾ ಕೀಪ್ಯಾಡ್ ಫೋನ್ ಹೊಂದಿರುವ ಬಳಕೆದಾರರಿಗೆ ದೊಡ್ಡಮಟ್ಟದಲ್ಲಿ ಹಣ ಉಳಿತಾಯವಾಗಲಿದೆ. ಗ್ರಾಮೀಣ ಭಾಗದ ಜನರು ಮತ್ತ ಹಿರಿಯ ನಾಗರಿಕರು ಈ ರೀತಿಯ ಫೋನ್‌ಗಳನ್ನು ಬಳಸುತ್ತಿರುತ್ತಾರೆ.
2.ಗ್ರಾಹಕ ಸಂರಕ್ಷಣಾ ನಿಯಂತ್ರಣ ನಿಯಮದ ಪ್ರಕಾರ, ಬಳಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಟ್ಯಾರಿಫ್ ವೋಚರ್ (STV) ವ್ಯಾಲಿಡಿಟಿಯನ್ನು 90 ದಿನದಿಂದ 365 ದಿನಕ್ಕೆ ಅಂದ್ರೆ 1 ವರ್ಷಕ್ಕೆ ಹೆಚ್ಚಿಸಲಾಗಿದೆ.
3.ಆನ್‌ಲೈನ್ ರೀಚಾರ್ಜ್ ಬಳಕೆ ಹೆಚ್ಚಾಗುತ್ತಿರೋದನ್ನು ಗಮನಿಸಿರುವ ಟ್ರಾಯ್, ಪಿಸಿಕಲ್ ವೋಚರ್‌ಗಳ ಬಣ್ಣ ಕೋಡಿಂಗ್ ಅನ್ನು ತೆಗೆದುಹಾಕಲು ನಿರ್ಧರಿಸಿದೆ. ಮೊದಲು ಪ್ರತಿ ವರ್ಗದ ರೀಚಾರ್ಜ್‌ಗೆ ಪ್ರತ್ಯೇಕ ಬಣ್ಣ ಕೋಡಿಂಗ್ ವ್ಯವಸ್ಥೆ ಇತ್ತು.
4.2012ರಲ್ಲಿ ಟೆಲಿಕಾಂ ಟ್ಯಾರಿಫ್ ಆರ್ಡರ್ 50ನೇ ತಿದ್ದುಪಡಿ ಪ್ರಕಾರ, ಕನಿಷ್ಠ 10 ರುಪಾಯಿ ಬೆಲೆಯ ವೋಚರ್ ಕಡ್ಡಾಯಗೊಳಿಸಿತ್ತು. ಟಾಪ್ ಅಪ್ ರೀಚಾರ್ಜ್‌ನಲ್ಲಿಯೂ 10 ರೂಪಾಯಿಯ ರೀಚಾರ್ಜ್ ಕಡ್ಡಾಯ ಮಾಡಿತ್ತು. ಬದಲಾದ ಸನ್ನಿವೇಶಗಳನ್ನು ಗಮನಿಸಿರುವ TRAI, ಈ 10 ರೂಪಾಯಿ ವೋಚರ್ ಆಯ್ಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈಗ ಟೆಲಿಕಾಂ ಕಂಪನಿಗಳು ಈಗ 10 ರೂಪಾಯಿಗಳ ಟಾಪ್-ಅಪ್ ಮತ್ತು ಯಾವುದೇ ಮೌಲ್ಯದ ಯಾವುದೇ ಟಾಪ್-ಅಪ್ ವೋಚರ್ ವಿತರಿಸುವ ಸ್ವಾತಂತ್ರ್ಯವನ್ನು ಹೊಂದಿವೆ. 1
ಜುಲೈ-2024ರಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿಕೊಂಡಿದ್ದವು. ಇದರ ಪರಿಣಾಮ ಎರಡು ಸಿಮ್ ಬಳಕೆದಾರರಿಗೆ ರೀಚಾರ್ಜ್ ದುಬಾರಿಯಾಗಿತ್ತು. ಬಳಕೆದಾರರ ಸಮಸ್ಯೆಗಳನ್ನು ಅರ್ಥಮಾಡಿಕೊಂಡ ಟೆಲಿಕಾಂ ನಿಯಂತ್ರಕ ಇದೀಗ ವಾಯ್ಸ್ ಮತ್ತು SMS ಸೇವೆಗಳನ್ನು ಬಳಸುವ ಬಳಕೆದಾರರಿಗೆ ಪರಿಹಾರವನ್ನು ನೀಡಿದೆ. ಟೆಲಿಕಾಂ ಕಂಪನಿಗಳು ಈಗ ಡ್ಯೂಯಲ್ ಸಿಮ್ ಬಳಕೆದಾರರಿಗೆ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಬಹುದು.