ಎನ್ಜೆರೆಕೋರ್ : ನಗರದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಘರ್ಷಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಶ್ಚಿಮ ಆಫ್ರಿಕಾ ದೇಶ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್ಜೆರೆಕೋರ್‌ನಲ್ಲಿ ಲೇಬ್ ಮತ್ತು ಎನ್ಜೆರೆಕೋರ್ ಫುಟ್‌ಬಾಲ್ ತಂಡಗಳ ನಡುವೆ ಪಂದ್ಯ ಆಯೋಜನೆಗೊಂಡಿತ್ತು.
ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಸ್ಥಳೀಯ ಆಸ್ಪತ್ರೆಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿಸಂಸ್ಥೆ 'ಏಜೆನ್ಸಿ ಫ್ರಾನ್ಸ್ ಪ್ರೆಸ್' (ಎಎಫ್‌ಪಿ), ಸಾವಿನ ಸಂಖ್ಯೆ ನೂರರ ಸನಿಹ ಇದೆ ಎಂದು ವೈದ್ಯರೊಬ್ಬರು ಅಂದಾಜಿಸಿರುವುದಾಗಿ ಪ್ರಕಟಿಸಿದೆ.
ಕ್ರೀಡಾಂಗಣದಲ್ಲಿ ಮತ್ತು ಹೊರಗೆ ಹಿಂಸಾಚಾರ ನಡೆಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಕನಿಷ್ಠ ನೂರು ಮಂದಿ ಮೃತಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನ ಮಂತ್ರಿ ಬಾಹ್ ಔರಿ, ಹಿಂಸಾಚಾರವನ್ನು ಖಂಡಿಸಿದ್ದಾರೆ.
'ಲೇಬ್ ಮತ್ತು ಜೆರೆಕೋರ್ ತಂಡಗಳ ನಡುವೆ ಭಾನುವಾರ ಮಧ್ಯಾಹ್ನ ನಡೆಯಬೇಕಿದ್ದ ಪಂದ್ಯವನ್ನು ಹಾಳು ಮಾಡಿದ ಘಟನೆಯನ್ನು ಸರ್ಕಾರ ಖಂಡಿಸುತ್ತದೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಒದಗಿಸಲು ಆಸ್ಪತ್ರೆಗಳಿಗೆ ಯಾರೊಬ್ಬರೂ ಅಡ್ಡಿಪಡಿಸದಂತೆ ಕರೆ ನೀಡುತ್ತದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಹಿಂಸಾಚಾರಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, 'ಪಂದ್ಯದ ವೇಳೆ ರೆಫ್ರಿ ವಿವಾದಾತ್ಮಕ ತೀರ್ಪು ನೀಡಿದ್ದರು. ಅದರ ಬೆನ್ನಲ್ಲೇ, ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಗಲಾಟೆ ಮಾಡಿದರು. ನಂತರ ಹಿಂಸಾಚಾರ ಭುಗಿಲೆದ್ದಿತು' ಎಂದು ಕ್ರೀಡಾಂಗಣಕ್ಕೆ ಹೋಗಿದ್ದ ಅಭಿಮಾನಿಯೊಬ್ಬರು ಹೇಳಿಕೆ ನೀಡಿರುವುದಾಗಿ 'ಎಎಫ್‌ಪಿ' ವರದಿ ಮಾಡಿದೆ.
Le gouvernement déplore les incidents qui ont émaillé le match de football entre les équipes de Labe et Nzerekore cet après-midi à Nzerekore . Lors de la bousculade des victimes sont enregistrées. Les autorités régionales sont à pied d’œuvre pour rétablir le calme et la sérénité…
— Bah Oury (@bahourykigna) December 1, 2024
⚠️🔞 WARNING: GRAPHIC 18+ 🔞⚠️
— 🔥🗞The Informant (@theinformant_x)
❗️🇬🇳 - At least 100 people lost their lives in violent clashes between rival fans during a football match in N'zerekore, Guinea.
This tragic event, which occurred at the end of a game, resulted in hundreds of fatalities. Medical sources confirmed… pic.twitter.com/xV3COoViUE