ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನಿಹದ ಶ್ರೀಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ 59ನೇ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಡಿ. 11ರಿಂದ 15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
11ರಂದು ಬೆಳಗ್ಗೆ ಗಣಪತಿ ಹೋಮ, 10ಕ್ಕೆ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಹಾಗೂ ಶ್ರೀ ಅಯ್ಯಪ್ಪ ದೇವರ ಬೆಳ್ಳಿ ಮೂರ್ತಿ ಸಮರ್ಪಣೆ, ಸಂಜೆ ಕಣಿಪುರ ಹರಿನಾರಾಯಣ ಮೈಯ್ಯ ಅವರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ ವಿವಿಧ ಮನರಂಜನಾ ಕಾರ್ಯಖ್ರಮ ನಡೆಯುವುದು.
12ರಂದು ಬೆಳಗ್ಗೆ 7ಕ್ಕೆ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 7ರಿಂದ 7.40ರವರೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಸಪ್ರತಿಷ್ಠೆ, 11ಕ್ಕೆ ಧಾರ್ಮಿಕಸಭೆ, ಸನ್ಮಾನ ಸಮಾರಂಭ, ಸಂಜೆ 7ಕ್ಕೆ ಯಕ್ಷಗಾನ ಬಯಲಾಟ ನಡೆಯುವುದು.
13ರಂದು ಬೆಳಗ್ಗಿನಿಮದ ವಿವಿಧ ಪೂಜೆ ನಡೆಯುವುದು. 14ರಂದು ಬೆಳಗ್ಗೆ ಹರಿನಾಮ ಕೀರ್ತನೆ, ಸಹಸ್ರನಾಮಾರ್ಚನೆ, ಸಂಜೆ 7ಕ್ಕೆ ಭರತ ನಾಟ್ಯ, ರಾತ್ರಿ 11ರಿಂದ ಅಯ್ಯಪ್ಪನ್ ಗೀತಾ, ಶರಣಂವಿಳಿ, ಕನಲ್ ಸೇವಾ, ಪಾಲ್‍ಕಿಂಡಿ ಪ್ರದಕ್ಷಿಣೆ, ಬೆಳಗ್ಗೆ 5ಕ್ಕೆ ಅಯ್ಯಪ್ಪನ್-ವಾವರ ಯುದ್ಧದ ಸನ್ನಿವೇಶ ನಡೆಯುವುದು.