ಸುಕ್ಮಾ : ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಗುರುವಾರ 11 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಭಾರತೀಯ ಕಮ್ಯುನಿಸ್ಟ್ ಪಾರ್ಟಿ'ಯ (ನಕ್ಸಲ್ ಸಂಘಟನೆ) 'ಪೆಡ್ಡಬೊಡ್ಕೆಲ್ ಕ್ರಾಂತಿಕಾರಿ ಪಕ್ಷ ಸಮಿತಿ'ಯ ಕೃಷಿ ಸಂಘದ ಅಧ್ಯಕ್ಷ ಜೋಗೇಂದ್ರ ಯಾದವ್ ಹಾಗೂ ಸಂಘಟನೆಯ ಸಾರ್ವಜನಿಕ ಸಂಪರ್ಕ ಸಮಿತಿಯ ಮುಖ್ಯಸ್ಥ ಹೇಮ್ಲಾ ದೇವಾ ಸೇರಿದಂತೆ 11 ಜನ ಶರಣಾಗಿದ್ದಾರೆ ಎಂದು ಎಸ್‌ಪಿ ಕಿರಣ್ ಚವಾಣ್ ತಿಳಿಸಿದರು.
ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್‌ವಸತಿ ಯೋಜನೆಯಡಿ ಶರಣಾದ ಎಲ್ಲರೂ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.