HEALTH TIPS

ಆಂಧ್ರ ಪ್ರದೇಶ, ನೇಪಾಳ, ಕ್ಯೂಬಾ ಸೇರಿದಂತೆ ಜಗತ್ತಿನ ಹಲವೆಡೆ ಭೂಕಂಪನ, ವನವಾಟುನಲ್ಲಿ 12 ಮಂದಿ ಸಾವು!

ನವದೆಹಲಿ: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿವೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಕಂಪನದ ಅನುಭವವಾಗಿದೆ.

ಜಿಲ್ಲೆಯ ಮುಂಡ್ಲಮೂರಿನಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಕಳೆದ ಮೂರು ದಿನಗಳಿಂದ ಮುಂಡ್ಲಮೂರಿನಲ್ಲಿ ಸತತ ಭೂಕಂಪನ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 10:35ಕ್ಕೆ ಭೂಮಿ ಕಂಪಿಸಿತು.

ಇಂದು ಮತ್ತೊಮ್ಮೆ ಕಂಪನದ ಅನುಭವವಾಗಿದೆ. ಇದರಿಂದ ಜನರು ಮನೆ ಬಿಟ್ಟು ಓಡಿ ಬಂದರು. ಶನಿವಾರ ಮತ್ತು ಭಾನುವಾರದಂದು ಕಂಪಿಸಿದ ಕಾರಣ ಮನೆಗಳಲ್ಲಿನ ವಸ್ತುಗಳು ಸಹ ಅಲುಗಾಡಿದವು. ಮೂರು ದಿನಗಳಿಂದ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ ಮತ್ತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಗುಜರಾತ್ ನ ಕಚ್ ನಲ್ಲೂ ಕಂಪನ

ಆಂಧ್ರ ಪ್ರದೇಶ ಮಾತ್ರವಲ್ಲದೇ ಗುಜರಾತ್ ನ ಕಚ್ ನಲ್ಲೂ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ರಾಜಧಾನಿ ಗಾಂಧಿನಗರ ದಿಂದ ಈಶಾನ್ಯಕ್ಕೆ 76 ಕಿಲೋಮೀಟರ್ ದೂರದಲ್ಲಿ ಲಖ್‌ಪತ್‌ನಲ್ಲಿ ದಾಖಲಾಗಿದೆ ಎಂದು ಮೂಲದ ಐಎಸ್‌ಆರ್ ತಿಳಿಸಿದೆ. ಈ ತಿಂಗಳಲ್ಲಿ ಇದು 2ನೇ ಕಂಪನವಾಗಿದೆ.

ನೇಪಾಳದಲ್ಲೂ ಕಂಪನ

ನೇಪಾಳದಲ್ಲಿ ಇಂದು ಮುಂಜಾನೆ 3.59ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು 29.17 N ಅಕ್ಷಾಂಶ ಮತ್ತು 81.59 E ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಅಂತೆಯೇ ನೇಪಾಳದ ಬಜುರಾ ಜಿಲ್ಲೆಯ ಜಗನ್ನಾಥ್ ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 5 ರ ಗೋತ್ರಿಯಲ್ಲಿ ಈ ಕೇಂದ್ರಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಮೇಲಿನ ಮತ್ತು ಕೆಳಗಿನ ಗೋತ್ರಿಯಲ್ಲಿ 123 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಇಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.


ವನವಾಟು 6.1 ತೀವ್ರತೆಯ ಭೂಕಂಪನ

ನಿನ್ನೆಯಷ್ಟೇ ಪೆಸಿಫಿಕ್ ದ್ವೀಪಸಮೂಹದ ವನವಾಟು ದೇಶದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಭಾನುವಾರ ಮುಂಜಾನೆ ವನವಾಟುವಿನ ಮುಖ್ಯ ದ್ವೀಪದಲ್ಲಿ 6.1 ತೀವ್ರತೆಯ ಭೂಕಂಪವು ಕಟ್ಟಡಗಳನ್ನು ನಡುಗಿಸಿತು. ಈ ಘಟನೆಯಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಭೂಕಂಪನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಭೂಕಂಪನದ ಕೇಂದ್ರ ಬಿಂದು 40 ಕಿಲೋಮೀಟರ್ (25 ಮೈಲುಗಳು) ಆಳದಲ್ಲಿ ಸಂಭವಿಸಿದ್ದು, ರಾಜಧಾನಿಯಿಂದ ಪಶ್ಚಿಮಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿತ್ತು ಎನ್ನಲಾಗಿದೆ.

ಕೂಬಾದಲ್ಲೂ ಕಂಪನ

ಇನ್ನು ಕ್ಯೂಬಾದಲ್ಲೂ ಭೂಕಂಪನವಾಗಿದ್ದು, 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಇಲ್ಲಿನ ಗುಯಿಸಾದಿಂದ 46 ಕಿ.ಮೀ ದಕ್ಷಿಣಕ್ಕೆ ಸುಮಾರು 25 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು EMSC ವರದಿ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries