ಇಸ್ತಾಂಬೂಲ್ : ಟರ್ಕಿಯ ವಾಯವ್ಯ ಪ್ರಾಂತ್ಯದಲ್ಲಿರುವ ಸರ್ಕಾರಿ ಶಸ್ತಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 12 ಜನ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಬಾಲಿಕೆಷಿರ್ ಎಂಬಲ್ಲಿಯ ಮದ್ದು ಗುಂಡುಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ.
20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಘಟನಾ ಸ್ಥಳದ ಸುತ್ತಮುತ್ತಲಿನ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಬಾಲಿಕೆಷಿರ್ ಗವರ್ನರ್ ತಿಳಿಸಿದ್ದಾರೆ.
ಈ ಘಟನೆ ಆಂತರಿಕ ತಪ್ಪುಗಳಿಂದ ಸಂಭವಿಸಿರುವುದೋ ಅಥವಾ ಹೊರಗಿನ ದುಷ್ಟಶಕ್ತಿಗಳಿಂದ ನಡೆದಿರುವುದೋ ಎಂಬುದು ಸದ್ಯ ದೃಢಪಟ್ಟಿಲ್ಲ. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಗವರ್ನರ್ ಉಸ್ತಾಗಾಲು ತಿಳಿಸಿದ್ದಾರೆ.